*ಗೋಣಿಕೊಪ್ಪಲು, ಅ. 1 : ವಾಲ್ಮೀಕಿ ಅಭಿವೃದ್ಧಿ ನಿಗಮದ ವತಿಯಿಂದ ಉದ್ಯಮಶೀಲತಾ ಯೋಜನೆ ಅಡಿಯಲ್ಲಿ ತಿತಿಮತಿ ಜಂಗಲ್ ಹಾಡಿಯ 4 ಫಲಾನುಭವಿ ಗಳಿಗೆ ನೂತನ ಬೊಲೆರೋ ಕಾರು ಗಳನ್ನು ನೀಡಲಾಯಿತು. ಈ ವಾಹನ ಗಳನ್ನು ಶಾಸಕ ಕೆ.ಜಿ.ಬೋಪಯ್ಯ ವಿತರಿಸಿದರು.

ಬಳಿಕ ಮಾತನಾಡಿದ ಅವರು ವಾಲ್ಮೀಕಿ ಜನಾಂಗದ ಯುವಕರು ವಾಹನಗಳನ್ನು ಬಾಡಿಗೆ ಅಥವಾ ಸ್ವಂತ ಉಪಯೋಗಕ್ಕೆ ಬಳಸಿಕೊಂಡು ಆರ್ಥಿಕ ಅಭಿವೃದ್ಧಿ ಹೊಂದಲು ನೆರವಾಗುವುದು. ಪರಿಶಿಷ್ಟ ಜಾತಿ ಮತ್ತು ಪಂಗಡದ ಯುವಕರು ಸ್ವಯಂ ಉದ್ಯೋಗ ಕೈಗೊಳ್ಳಲು ಶೇ.50 ರಷ್ಟು ಸಬ್ಸಿಡಿ ಲಭಿಸಲಿದೆ ಎಂದು ಹೇಳಿದರು. ತಾಲೂಕು ಐಟಿಡಿಪಿ ಅಧಿಕಾರಿ ಗುರು ಶಾಂತಪ್ಪ, ಕಾರ್ಯನಿರ್ವಹಣಾಧಿಕಾರಿ ಅಪ್ಪಣ್ಣ ಹಾಜರಿದ್ದರು.