ನಾಪೆÇೀಕ್ಲು, ಸೆ. 29 : ದೇಶದ ಪ್ರಧಾನಿ ನರೇಂದ್ರ ಮೋದಿ, ದೀನ್ ದಯಾಳ್ ಉಪಾಧ್ಯಾಯ, ಗಾಂಧೀಜಿಯವರ ಹುಟ್ಟು ಹಬ್ಬದ ಸೇವಾ ಸಪ್ತಾಹ ಪ್ರಯುಕ್ತ ಬಿ.ಜೆ.ಪಿ. ರೈತ ಮೋರ್ಚಾ, ನಾಪೆÉÇೀಕ್ಲು ಗ್ರಾಮದ ಹಳೆತಾಲೂಕಿನ ಉದಯ ಶಂಕರ್ ಅವರ ಮನೆಯಲ್ಲಿ ಗೋವು ಪೂಜೆ, ಗಂಗಾ ಪೂಜೆ, ಮತ್ತು ಭೂಮಿ ಪೂಜೆಯನ್ನು ಮಾಡುವುದರ ಮೂಲಕ ವಿಭಿನ್ನ ರೀತಿಯಲ್ಲಿ ಬಿ.ಜೆ.ಪಿ.ಯ ನೂತನ ಕಾರ್ಯಕ್ರಮವನ್ನು ಆಯೋಜಿಸಿದ್ದರು.

ಕಾರ್ಯಕ್ರಮವನ್ನು ಗೋವು, ಭೂಮಿ, ಮತ್ತು ಗಂಗೆಗೆ ಪೂಜೆ ಸಲ್ಲಿಸಿ ಉದ್ಘಾಟಿಸಿದ ರಾಜ್ಯ ರೈತ ಮೋರ್ಚಾದ ಪ್ರಧಾನ ಕಾರ್ಯದರ್ಶಿ ಡಾ, ಬಿ.ಸಿ. ನವೀನ್ ಮಾತನಾಡಿ ಜೀವ ಸಂಕುಲವನ್ನು ಉಳಿಸ ಬೇಕಾದರೆ ನಾವು ಭೂಮಿ, ಗಂಗೆ, ಮತ್ತು ಗೋವನ್ನು ಉಳಿಸಿಕೊಂಡರೆ ಮಾತ್ರ ಸಾಧ್ಯ ಎಂದರು. ಒಂದು ಹಿಡಿ ಮಣ್ಣು ಬೆಳೆಯಲು 500 ವರ್ಷಗಳು ಬೇಕು ಆದುದರಿಂದ ಮಣ್ಣಿನ ಬಗ್ಗೆಯು ಜಾಗೃತಿ ಮುಖ್ಯ ಎಂದರು. ಪ್ರಪಂಚದ 60% ಜನರು ಇಂದು ಕಲುಶಿತ ನೀರನ್ನು ಕುಡಿದು ವಾರ್ಷಿಕ 2 ಲಕ್ಷ ಜನರು ಬಲಿಯಾಗುತ್ತಾರೆ. ಆದುದರಿಂದ ನಾವು ನೀರು ಕಲುಶಿತ ವಾಗದಂತೆ ನೋಡಿಕೊಳ್ಳಬೇಕಿದೆ ಎಂದರು. ಗೋವು ಮಾನವನ ಜೀವನದಲ್ಲಿ ಮುಖ್ಯವಾಗಿದ್ದು ಇವು ನೀಡುವ ಹಾಲು ಮೊಸರು, ತುಪ್ಪ, ಗೋಮೂತ್ರದಿಂದ ಇಂದು ಹಲವಾರು ರೋಗ ರುಜಿನಗಳು ಮಾಯವಾಗಿ ಮನುಷ್ಯ ಆರೋಗ್ಯದಿಂದ ಬದುಕಲು ಸಾಧ್ಯವಾಗಿದೆ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಜ್ಯ ಬಿ.ಜೆ.ಪಿ. ಮಾಜಿ ಪ್ರಧಾನ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ ಗೋವು ಪೂಜೆ, ಗಂಗಾ ಪೂಜೆ, ಮತ್ತು ಭೂಮಿ ಪೂಜೆಯಂತಹ ವಿಭಿನ್ನ ಕಾರ್ಯಕ್ರಮ ಇದುವರೆಗೆ ಯಾವುದೇ ಒಂದು ಪಕ್ಷದಿಂದ ಆಗಿಲ್ಲ. ಇದನ್ನು ಬಿ.ಜೆ.ಪಿ. ಪಕ್ಷ ಮಾಡಿದೆ ಎಂದರು. ಪ್ರಧಾನಿ ನರೇಂದ್ರ ಮೋದಿ, ಮಹಾತ್ಮ ಗಾಂಧೀಜಿ, ದೀನ್ ದಯಾಳ್ ಉಪಾಧ್ಯಾಯ, ಇವರುಗಳ ಹುಟ್ಟು ಹಬ್ಬದ ಪ್ರಯುಕ್ತ ಇಂತಹ ಕಾರ್ಯಕ್ರಮವನ್ನು ಹಮ್ಮಿಕೊಂಡಿರುವುದು. ಅವರಿಗೆ ನೀಡಿದ ಗೌರವವಾಗಿದೆ ಎಂದರು.

ಜಿಲ್ಲಾ ರೈತ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಮಾತನಾಡಿ, ಬಿ.ಜೆ.ಪಿ. ಪಕ್ಷವು ಜನರ ಒಳಿತಿಗಾಗಿ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು ಪಕ್ಷದ ಕಾರ್ಯಕ್ರಮದ ಬಗ್ಗೆ ಗ್ರಾಮೀಣ ಭಾಗದ ಜನರಿಗೆ ತಿಳಿಸಲು ಕಾರ್ಯಕರ್ತರು ಶ್ರಮಿಸಬೇಕೆಂದರು.

ಈ ಸಂದರ್ಭ ತಮ್ಮ ಗದ್ದೆಯಲ್ಲಿ ನಿರಂತರವಾಗಿ ಕೃಷಿಯನ್ನು ಮಾಡಿದ 9 ಜನ ಬೆಳೆಗಾರರನ್ನು ಮತ್ತು ಕಾರ್ಮಿಕ ಕೃಷಿಕರನ್ನು ಶಾಲು ಹೊದಿಸಿ ನೆನಪಿನ ಕಾಣಿಕೆಯನ್ನು ನೀಡಿ ಸನ್ಮಾನಿಸಲಾಯಿತು.

ಕಾರ್ಯಕ್ರಮವನ್ನು ಮಡಿಕೇರಿ ತಾಲೂಕಿನ ಕೃಷಿ ಮೋರ್ಚಾದ ಅಧ್ಯಕ್ಷ ಶಿವಚಾಳಿಯಂಡ ಜಗದೀಶ್ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಿ.ಜೆ.ಪಿ. ಶಕ್ತಿ ಕೇಂದ್ರದ ಅಧ್ಯಕ್ಷ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ವಹಿಸಿದ್ದರು. ವೇದಿಕೆಯಲ್ಲಿ, ಜಿ.ಪಂ. ಸದಸ್ಯ ಪಾಡಿಯಮ್ಮಂಡ ಮುರುಳಿಧರ್, ಕಲಾವತಿ, ತಾಲೂಕು ಬಿ.ಜೆ.ಪಿ.ಅಧ್ಯಕ್ಷ ಕಾಂಗೀರ ಸತೀಶ್, ಕಾರ್ಯದರ್ಶಿ ಕೋಡಿ ಪ್ರಸನ್ನ, ತಾ. ಪಂಚಾಯತ್ ಅಧ್ಯಕ್ಷೆ ತೆಕ್ಕಡ ಶೋಭಾ ಮೋಹನ್, ಆರ್.ಎಂ.ಸಿ. ಅಧ್ಯಕ್ಷ ಬೆಪ್ಪುರನ ಮೇದಪ್ಪ, ತಾ. ಪಂಚಾಯತ್ ಸದಸ್ಯೆ ಉಮಾಪ್ರಭು, ಮಹಿಳಾ ವಿಭಾಗದ ಅಧ್ಯಕ್ಷೆ ಕವಿತ, ಕೃಷಿ ಪತ್ತಿನ ಸಂಘದ ಅಧ್ಯಕ್ಷ ಅರೆಯಡ ಅಶೋಕ ಮತ್ತಿತರರು ಇದ್ದರು. ಮೊದಲಿಗೆ ಶ್ರೀಕನ್ಯಾ ಹರೀಶ್‍ಭಟ್ ಪ್ರಾರ್ಥಿಸಿದರು. ಶಿವಚಾಳಿಯಂಡ ಜಗದೀಶ್ ಸ್ವಾಗತಿಸಿ ಕಂಗಾಂಡ ಜಾಲಿ ಪೂವಪ್ಪ ನಿರೂಪಿಸಿದರು. ಮುರುಳಿಧರ್ ಕರುಂಬಮ್ಮಯ್ಯ ವಂದಿಸಿದರು.