ಕುಶಾಲನಗರ, ಸೆ. 28: ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್‍ನ ಅಧೀನದಲ್ಲಿ ಕುಶಾಲನಗರದ ಫಾಲಿಳಾ ಶರೀಅತ್ ಕಾಲೇಜಿನ ಉದ್ಘಾಟನಾ ಕಾರ್ಯಕ್ರಮವು ಕುಶಾಲನಗರದ ಶಾದಿ ಮಹಲ್‍ನಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಪಾಣಕ್ಕಾಡ್‍ನ ಸಯ್ಯದ್ ಹಾಷಿರ್ ಅಲಿ ಶಿಹಾಬ್ ತಂಗಳ್ ಉದ್ಘಾಟಿಸಿದರು.
ಕೊಡಗಿನ ಪ್ರಭಾರ ಖಾಜಿ ಅಬ್ದುಲ್ಲಾ ಫೈಜಿ, ನಿವೃತ್ತ್ತ ಶಿಕ್ಷಕÀ ನಜೀರ್ ಪ್ರಮುಖರಾದ ಕಬೀರ್ ಫೈಜಿ, ಕುಶಾಲನಗರ ಹಿಲಾಲ್ ಮಸೀದಿ ಅಧ್ಯಕ್ಷ ಇಸ್ಮಾಯಿಲ್ , ಶುಂಟಿಕೊಪ್ಪದ ಧರ್ಮಗುರುಗಳಾದ ಉಸ್ಮಾನ್ ಫೈಜಿ, ಹಿಲಾಲ್ ಮಸೀದಿ ಧರ್ಮ ಗುರುಗಳಾದ ಸೂಫಿ ದಾರಿಮಿ, ದಾರುಲ್ ಉಲೂಂ ಮದ್ರಸದ ಪ್ರಾಂಶುಪಾಲ ತಮ್ಲೀಕ್ ದಾರಿಮಿ ಮತ್ತಿತರರು ಇದ್ದರು.