ಮಡಿಕೇರಿ, ಸೆ. 28 : ಮಡಿಕೇರಿ ನಗರದ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಗರಾಧ್ಯಕ್ಷ ಮನು ಮಂಜುನಾಥ್ ಅವರ ಅಧ್ಯಕ್ಷತೆಯಲ್ಲಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎನ್.ಎಂ. ಕಾಳಪ್ಪ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್‍ಕುಮಾರ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಕಾರ್ಯದರ್ಶಿ ಸತೀಶ್, ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಅಪ್ಪಣ್ಣ ಕೆ.ಂ., ಉಮೇಶ್ ಸುಬ್ರಮಣಿ ಅವರು ಉಪಸ್ಥಿತಿಯಲ್ಲಿ ಬೂತ್ ಮಟ್ಟದ ಅಧ್ಯಕ್ಷರು ಮತ್ತು ಕಾರ್ಯಕರ್ತರ ಸಭೆ ನಡೆಸಿ ನಗರದ 6 ಶಕ್ತಿ ಕೇಂದ್ರದ ಪ್ರಮುಖರ ಆಯ್ಕೆ ನಡೆಸಲಾಯಿತು.

ಶಕ್ತಿ ಕೇಂದ್ರ -1ರ ಪ್ರಮುಖ್ ಆಗಿ ವಿನಯ್ ಕುಮಾರ್, ಸಹ ಪ್ರಮುಖ್ ಚಿತ್ರಾವತಿ, ಶಕ್ರಿ ಕೇಂದ್ರ - 2ರ ಪ್ರಮುಖ್ ಸುನಿಲ್, ಸಹ ಪ್ರಮುಖ್ ಹರ್ಷ, ಶಕ್ತಿ ಕೇಂದ್ರ-3ರ ಪ್ರಮುಖ್ ಆಗಿ ಎಂ. ನಯನ, ಸಹ ಪ್ರಮುಖ್ ಸಂತೊಷ್ ಬಿ.ಎಂ, ಶಕ್ತಿ ಕೇಂದ್ರ - 4ರ ಪ್ರಮುಖ್ ಆಗಿ ಸುರೇಶ್ ಕೆ. ಸಹ ಪ್ರಮುಖ್ ಕರುಣಾಕರ್, ಶಕ್ತಿ ಕೇಂದ್ರ 5ರ ಪ್ರಮುಖ್ ಆಗಿ ಡಿ.ಪಿ. ನಾಗೇಶ್, ಸಹ ಪ್ರಮುಖ್ ಜೀವನ್ ಟಿ.ಆರ್., ಶಕ್ತಿ ಕೇಂದ್ರ-6ರ ಪ್ರಮುಖ್ ಆಗಿ ಉಮೇಶ್ ಕೆ., ಸಹ ಪ್ರಮುಖ್ ರಾಕೇಶ್ ಆರ್. ಅವರುಗಳನ್ನು ನೇಮಕ ಮಾಡಲಾಗಿದೆ.