ನಾಪೆÇೀಕ್ಲು, ಸೆ. 28: ವಿಧಾನಪರಿಷತ್ ಸದಸ್ಯರ ಪ್ರಾದೇಶಿಕ ಅಭಿವೃದ್ಧಿ ಅನುದಾನದಲ್ಲಿ ನಾಪೆÇೀಕ್ಲು ಸಮೀಪದ ಎಮ್ಮೆಮಾಡಿನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಪ್ರಯಾಣಿಕರ ತಂಗುದಾಣವನ್ನು ಇಂದು ಉದ್ಘಾಟಿಸಲಾಯಿತು.
ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಅವರ ರೂ. 2 ಲಕ್ಷ ಅನುದಾನದಲ್ಲಿ ನಿರ್ಮಿಸಲಾದ ಈ ಪ್ರಯಾಣಿಕರ ತಂಗುದಾಣವನ್ನು ನಾಪೆÇೀಕ್ಲು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಇಸ್ಮಾಯಿಲ್ ಅವರು ಉದ್ಘಾಟಿಸಿದರು.
ಕೊಡಗು ಡಿಸಿಸಿ ಉಪಾಧ್ಯಕ್ಷ ಎಚ್.ಎ. ಹಂಸ, ಎಮ್ಮೆಮಾಡು ವಲಯ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಂಸ ಪಡಿಯಾಣಿ, ಕಾಂಗ್ರೆಸ್ ಮುಖಂಡರಾದ ಚೆಕ್ಕೆರ ಇಬ್ರಾಹಿಂ ಹಾಜಿ, ಯುವ ಕಾಂಗ್ರೆಸ್ ಪ್ರಮುಖರಾದ ಕೆ. ಮೈಸಿ, ಎಮ್ಮೆಮಾಡು ತಾಜುಲ್ ಇಸ್ಲಾಂ ಮುಸ್ಲಿಂ ಜಮಾಅತ್ ಸಮಿತಿ ಅಧ್ಯಕ್ಷರು ಸೇರಿದಂತೆ ಸ್ಥಳೀಯ ಮುಖಂಡರು ಹಾಜರಿದ್ದರು.