ಮಡಿಕೇರಿ, ಸೆ. 28: ಜಿಲ್ಲೆಯಲ್ಲಿ 27 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2649 ಪ್ರಕರಣಗಳು ವರದಿಯಾಗಿದ್ದು, 21649 ಮಂದಿ ಗುಣಮುಖರಾಗಿದ್ದಾರೆ. ಒಟ್ಟು 34 ಮಂದಿ ಸಾವನ್ನಪ್ಪಿದ್ದು 413 ಪ್ರಕರಣ ಗಳು ಸಕ್ರಿಯವಾಗಿವೆÉ. ಸೋಂಕಿತರ ಪೈಕಿ 91 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 60 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 262 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 380 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಾದಾಪುರ ಜಂಬೂರು ಬಾಣೆಯ 54 ವರ್ಷದ ಮಹಿಳೆ, ವೀರಾಜಪೇಟೆ ಡೆಂಟಲ್ ಕಾಲೇಜ್ ಮಲೆತಿರುಕೆ ಬೆಟ್ಟ ಸಮೀಪದ 36 ವರ್ಷದ ಪುರುಷ, ವೀರಾಜಪೇಟೆ ಪುದುಕೋಟೆ ಗ್ರಾಮದ ಕೋಟೆಕೊಪ್ಪದ 48 ವರ್ಷದ ಮಹಿಳೆ ಮತ್ತು 52 ವರ್ಷದ ಪುರುಷ, ಮದೆನಾಡು ದೇವರಕೊಲ್ಲಿಯ 25 ವರ್ಷದ ಮಹಿಳೆ, ನಂಜರಾಯಪಟ್ಟಣ ಚಿನ್ನೂರು ಗ್ರಾಮದ 45 ವರ್ಷದ ಮಹಿಳೆ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 31 ವರ್ಷದ ಪುರುಷ, ಕುಶಾಲನಗರ ವೆಂಕಟೇಶ್ವರ ಬಡಾವಣೆಯ 35 ವರ್ಷದ ಪುರುಷ, ವೀರಾಜಪೇಟೆ ಗಾಂಧೀನಗರ ಪೆÇಲೀಸ್ ವಸತಿಗೃಹದ 53 ವರ್ಷದ ಪುರುಷ, ನಾಪೆÇೀಕ್ಲು ಕೊಳಕೇರಿ ಕೊಟ್ಟೇರಿ ಬಸ್ ನಿಲ್ದಾಣ ಸಮೀಪದ 47 ವರ್ಷದ ಮಹಿಳೆ, ಶಿರಂಗಾಲ ನಾಕೂರು ಮಾಲೂರು ಗ್ರಾಮದ 41 ವರ್ಷದ ಪುರುಷ, ಕುಶಾಲನಗರ ಗೌಡ ಸಮಾಜ ಸಮೀಪದ 39 ವರ್ಷದ ಪುರುಷ, ಕೊಡ್ಲಿಪೇಟೆ ಬೆಸೂರು ಅಂಚೆಯ ಹೆಮ್ಮಾಲೆ ಗ್ರಾಮದ 66 ವರ್ಷದ ಪುರುಷ, ವೀರಾಜಪೇಟೆ ಕಾನೂರು ಚೆರ್ರಿಕಾಡು ಕೆ.ಬಾಡಗ ಅಂಗನವಾಡಿ ಸಮೀಪದ 66 ವರ್ಷದ ಮಹಿಳೆ, ಬಿರುನಾಣಿ ಮೃತ್ಯುಂಜಯ ದೇವಾಲಯ ಸಮೀಪದ ವಿಷ್ಣು ಎಸ್ಟೇಟ್‍ನ 20 ವರ್ಷದ ಮಹಿಳೆ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹ ಸಮೀಪದ 39 ವರ್ಷದ ಪುರುಷ, ಮಡಿಕೇರಿ ವೈದ್ಯಕೀಯ ಕಾಲೇಜಿನ ಭೋಧಕೇತರ ಸಿಬ್ಬಂದಿ ವಸತಿಗೃಹದ 25 ವರ್ಷದ ಪುರುಷ, ಮಡಿಕೇರಿ ಕನ್ನಿಕಾ ಬಡಾವಣೆಯ ಲಿಟಲ್ ಫ್ಲವರ್ ಶಾಲೆ ಸಮೀಪದ 49 ವರ್ಷದ ಪುರುಷ, ಸೋಮವಾರಪೇಟೆ ಚೌಡ್ಲುವಿನ ಸಿದ್ಧೇಶ್ವರ ಟೈರ್ ಶಾಪ್ ಸಮೀಪದ 40 ವರ್ಷದ ಪುರುಷ, ಸೋಮವಾರಪೇಟೆ ಚೌಡ್ಲುವಿನ ಕಲ್ಲಾರೆ ಆಲೆಕಟ್ಟೆ ರಸ್ತೆಯ 50 ವರ್ಷದ ಮಹಿಳೆ, ಮಡಿಕೇರಿ ಮಂಗಳಾದೇವಿ ನಗರ ಆರ್.ಎಂ.ಸಿ ಹಿಂಭಾಗದ 60 ವರ್ಷದ ಪುರುಷ ಮತ್ತು 52 ವರ್ಷದ ಮಹಿಳೆ, ಕೊಡ್ಲಿಪೇಟೆ ಬೆಸೂರುವಿನ 43 ವರ್ಷದ ಮಹಿಳೆ, ಕುಶಾಲನಗರ ಬಸವೇಶ್ವರ ಬಡಾವಣೆಯ 72 ವರ್ಷದ ಪುರುಷ, ನೆಲ್ಲಿಹುದಿಕೇರಿ ಸೇತುವೆ ಸಮೀಪದ 23 ವರ್ಷದ ಮಹಿಳೆ, ಮಡಿಕೇರಿ ತ್ಯಾಗರಾಜ ಕಾಲೋನಿಯ ವಾಟರ್ ಟ್ಯಾಂಕ್ ಸಮೀಪದ 73 ವರ್ಷದ ಪುರುಷ, ಮಡಿಕೇರಿ ಮಂಗಳಾದೇವಿ ನಗರದ ಕ್ರಿಸ್ಟಲ್ ಹಾಲ್ ಸಮೀಪದ 57 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.