ಮಡಿಕೇರಿ, ಸೆ.28: ಕೊಡಗು ಜಿಲ್ಲಾ ಕ.ಸಾ.ಪ ಪ್ರತಿವರ್ಷ ಕೊಡ ಮಾಡುತ್ತಿರುವ ಕಥೆಗಾರ್ತಿ ಕೊಡಗಿನ ಗೌರಮ್ಮನವರ ಹೆಸರಿನಲ್ಲಿ ಅವರ ಕುಟುಂಬಸ್ಥರು ಸ್ಥಾಪಿಸಿರುವ ಗೌರಮ್ಮ ದತ್ತಿಯ 2020ರ ಸಾಲಿನ ಪುರಸ್ಕಾರಕ್ಕೆ ಕೊಡಗಿನ ಲೇಖಕಿಯರಿಂದ ಕೃತಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತಿಯುಳ್ಳ ಲೇಖಕಿಯರು ತಮ್ಮ ಸ್ವಯಂರಚಿತ ಯಾವುದಾದರು ಒಂದು ಕೃತಿಯ ಮೂರು ಪ್ರತಿಗಳನ್ನು ಅಕ್ಟೋಬರ್, 10 ರೊಳಗೆ ಜಿಲ್ಲಾ ಕ.ಸಾ.ಪ. ಕಚೇರಿಯಲ್ಲಿ ನೇರವಾಗಿ ಅಥವಾ ಅಂಚೆ ಮೂಲಕ ಮಡಿಕೇರಿಯ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದ ಬಳಿ ಇರುವ ಜಿಲ್ಲಾ ಕ.ಸಾ.ಪ. ಕಚೇರಿಗೆ ತಲಪಿಸುವಂತೆ ಕ.ಸಾ.ಪ. ಗೌರವ ಕಾರ್ಯದರ್ಶಿ ಕೆ.ಎಸ್.ರಮೇಶ್ ಅವರು ತಿಳಿಸಿದ್ದಾರೆ.