ಮಡಿಕೇರಿ, ಸೆ. 27: ಜಿಲ್ಲೆಯಲ್ಲಿ 58 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಇದುವರೆಗೆ 2622 ಪ್ರಕರಣಗಳು ವರದಿಯಾಗಿದ್ದು, 2168 ಮಂದಿ ಗುಣಮುಖರಾಗಿದ್ದಾರೆ. 420 ಸಕ್ರಿಯ ಪ್ರಕರಣಗಳಿವೆ. ವೀರಾಜಪೇಟೆ ಕೋಣನಕಟ್ಟೆಯ ನಿವಾಸಿ 57 ವರ್ಷದ ಪುರುಷರೊಬ್ಬರು ಮೃತಪಟ್ಟಿದ್ದು ಮೃತಪಟ್ಟವರ ಸಂಖ್ಯೆ 34 ಕ್ಕೆ ಏರಿದೆ. ಸೋಂಕಿತರ ಪೈಕಿ 89 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, 54 ಮಂದಿ ಕೋವಿಡ್ ಕೇರ್ ಸೆಂಟರ್‍ನಲ್ಲಿ ಹಾಗೂ 277 ಮಂದಿ ಹೋಮ್ ಐಸೋಲೇಷನ್‍ನಲ್ಲಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 403 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ಮಾದಾಪುರ ಬಿಳಿಗೇರಿ ಗ್ರಾಮ ಮತ್ತು ಅಂಚೆಯ 66 ವರ್ಷದ ಪುರುಷ, ಕುಶಾಲನಗರ ಗುಮ್ಮನಕೊಲ್ಲಿ ವಿನಾಯಕ ಬಡಾವಣೆಯ 46 ವರ್ಷದ ಮಹಿಳೆ, ಕಡಗದಾಳು ಭಗವತಿ ದೇವಾಲಯ ಸಮೀಪದ 70 ವರ್ಷದ ಪುರುಷ, ಮಡಿಕೇರಿ ಹಾಕಿ ಗ್ರೌಂಡ್ ಎದುರಿನ 47 ಮತ್ತು 39 ವರ್ಷದ ಪುರುಷರು, ಕರಡಿಗೋಡುವಿನ 34, 39, 33, 19 ವರ್ಷದ ಪುರುಷರು, 28 ವರ್ಷದ ಮಹಿಳೆ ಮತ್ತು 4 ವರ್ಷದ ಬಾಲಕ, ಭಾಗಮಂಡಲ ಆಟೋ ನಿಲ್ದಾಣ ಸಮೀಪದ 39 ವರ್ಷದ ಪುರುಷ, ಕೊಡ್ಲಿಪೇಟೆಯ ಮುಖ್ಯ ರಸ್ತೆಯ 21 ವರ್ಷದ ಪುರುಷ ಮತ್ತು 16 ವರ್ಷದ ಬಾಲಕ, ಸೋಮವಾರಪೇಟೆ ಹೆಬ್ಬಾಲೆ ದೇವಸ್ಥಾನ ರಸ್ತೆಯ 27 ವರ್ಷದ ಮಹಿಳೆ, ಕುಶಾಲನಗರ ಹೌಸಿಂಗ್ ಬೋರ್ಡ್ ಆರ್.ಆರ್.ಆರ್ ಲೇಔಟ್ ನ 67 ವರ್ಷದ ಮಹಿಳೆ, ಆಲೂರು ಸಿದ್ದಾಪುರ 28 ಮತ್ತು 55 ವರ್ಷದ ಪುರುಷರು, ಕುಶಾಲನಗರ ಮಾರುತಿ ಲೇಔಟ್ ನ 51 ವರ್ಷದ ಪುರುಷ, ಮಡಿಕೇರಿ ಓಂಕಾರೇಶ್ವರ ದೇವಾಲಯ ರಸ್ತೆಯ ಬ್ರಾಹ್ಮಣ ವ್ಯಾಲಿಯ 33 ವರ್ಷದ ಪುರುಷ ಮತ್ತು 56 ವರ್ಷದ ಮಹಿಳೆ, ಮಡಿಕೇರಿ ಕಾರಾಗೃಹ ವಸತಿಗೃಹದ 38 ವರ್ಷದ ಪುರುಷ, ಸೋಮವಾರಪೇಟೆ ಅಬ್ಬೂರುಕಟ್ಟೆ ಆದಿನಡೂರು ಗ್ರಾಮದ 60 ವರ್ಷದ ಮಹಿಳೆ ಮತ್ತು 68 ವರ್ಷದ ಪುರುಷ, ಟಿ.ಶೆಟ್ಟಿಗೇರಿಯ 74 ಮತ್ತು 54 ವರ್ಷದ ಮಹಿಳೆಯರು, ವೀರಾಜಪೇಟೆ ಮೀನುಪೇಟೆಯ ವಿನಾಯಕ ಶಾಲೆ ಹಿಂಭಾಗದ 45 ವರ್ಷದ ಪುರುಷ, ಗೋಣಿಕೊಪ್ಪ ಎಚ್.ಸಿ ಪುರ ಅಂಗನವಾಡಿ ಸಮೀಪದ 36 ವರ್ಷದ ಪುರುಷ, ಸೋಮವಾರಪೇಟೆ ನೆಲ್ಲಿಹುದಿಕೇರಿ ಸೇತುವೆ ಸಮೀಪದ 35 ವರ್ಷದ ಪುರುಷ, ಹಾಸನದ ಕೊಣನೂರಿನ 32 ವರ್ಷದ ಮಹಿಳೆ, ಸೋಮವಾರಪೇಟೆ ಬಿಳಿಗೇರಿ ಸೇತುವೆ ಸಮೀಪದ 60 ವರ್ಷದ ಪುರುಷ, ಮಡಿಕೇರಿ ಪುಟಾಣಿನಗರ ಚಾಮರಾಜ ಬಂಗಲೆ ಸಮೀಪದ 56 ವರ್ಷದ ಮಹಿಳೆ, ಕರಡಿಗೋಡು ಪೈಸಾರಿಯ 26 ವರ್ಷದ ಪುರುಷ, ನೆಲ್ಲಿಹುದಿಕೇರಿ ಎಂಜಿ ಕಾಲೋನಿಯ 31 ವರ್ಷದ ಪುರುಷ, ದೇವರಕೊಲ್ಲಿಯ ಗ್ರೀನ್ ಕೂರ್ಗ್ ಎಸ್ಟೇಟ್ ನ 47, 50, 60 ವರ್ಷದ ಮಹಿಳೆ, 47, 18, 19 ವರ್ಷದ ಪುರುಷರು, 11, 4 ವರ್ಷದ ಬಾಲಕಿಯರು, 35, 19,46 ವರ್ಷದ ಮಹಿಳೆ, 11 ವರ್ಷದ ಬಾಲಕ, 62 ,66 ವರ್ಷದ ಮಹಿಳೆಯರು ಮತ್ತು 14 ವರ್ಷದ ಪುರುಷ, ಮೂರ್ನಾಡುವಿನ 57 ವರ್ಷದ ಪುರುಷ, ಹಾಸನ ಕೊಣನೂರುವಿನ 65 ವರ್ಷದ ಪುರುಷ, ಮರಗೋಡು ಗ್ರಾಮದ ಕಟ್ಟೆಮರಡುವಿನ 31 ವರ್ಷದ ಪುರುಷ, ಭಾಗಮಂಡಲ ಆಟೋ ನಿಲ್ದಾಣ ಸಮೀಪದ 3 ವರ್ಷದ ಬಾಲಕ, ಕತ್ತಲೆಕಾಡುವಿನ 45 ವರ್ಷದ ಪುರುಷ, ಮಡಿಕೇರಿ ಸುದರ್ಶನ ಅತಿಥಿ ಗೃಹ ಸಮೀಪದ 39 ವರ್ಷದ ಮಹಿಳೆ, ಮಡಿಕೇರಿ ಆಜಾದ್ ನಗರ ಲತೀಫ್ ಸ್ಟೋರ್ ಹಿಂಭಾಗದ 28 ವರ್ಷದ ಮಹಿಳೆ ಮತ್ತು 36 ವರ್ಷದ ಪುರುಷ., ವಿರಾಜಪೇಟೆ ಕೋಣನಕಟ್ಟೆ ಗ್ರಾಮ ಮತ್ತು ಅಂಚೆಯ 56 ವರ್ಷದ ಪುರುಷನಿಗೆ ಸೋಂಕು ದೃಢಪಟ್ಟಿದೆ.