ಗೋಣಿಕೊಪ್ಪಲು.ಸೆ.26: ದ. ಕೊಡಗಿನ ವಿವಿಧ ಭಾಗಗಳಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತುಗಳು ಕಂಡು ಬರುತ್ತಿರುವುದರಿಂದ ನಾಗರಿಕರು ಭಯಭೀತರಾಗಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಈ ಬಗ್ಗೆ ಕ್ರಮ ಕೈಗೊಳ್ಳಬೇಕೆಂದು ಶ್ರೀಮಂಗಲ ವ್ಯಾಪ್ತಿಯ ರೈತರು ಆಗ್ರಹಿಸಿದ್ದಾರೆ.

ಶ್ರೀಮಂಗಲ ಪಂಚಾಯ್ತಿ ವ್ಯಾಪ್ತಿಯ ಕುರ್ಚಿ ಗ್ರಾಮದ ಕೋಳೇರ ಝಾನ್ಸಿ ಮೊಣ್ಣಯ್ಯ ಎಂಬವರ ಕಾಫಿ ತೋಟದಲ್ಲಿ ಹುಲಿ ಸಂಚಾರದ ಹೆಜ್ಜೆ ಗುರುತುಗಳು ಕಂಡು ಬಂದಿದ್ದು, ಈ ಭಾಗದಲ್ಲಿ ಕಾರ್ಮಿಕರು ಭಯಗೊಂಡು ಕಾಫಿ ತೋಟದತ್ತ ಕೆಲಸಕ್ಕೆ ತೆರಳಲಿಲ್ಲ. ರೈತರ ಜಾನುವಾರುಗಳ ಮೇಲೆ ಆಗಿಂದ್ದಾಗೆ ಹುಲಿ ದಾಳಿ ನಡೆಸಿ ಜಾನುವಾರುಗಳನ್ನು ಕೊಂದು ಹಾಕುತ್ತಿದ್ದವು. ಇದೀಗ ಹುಲಿಯು ಈ ಭಾಗದಲ್ಲಿ ಸಂಚಾರ ಮಾಡಿರುವು ದರಿಂದ ರೈತರ ಜಾನುವಾರುಗಳನ್ನು ರಕ್ಷಿಸಿಕೊಳ್ಳುವುದು ದೊಡ್ಡ ಸಮಸ್ಯೆಯಾಗಿ ಕಾಡಿದೆ.