ಮಡಿಕೇರಿ, ಸೆ.27: ಜಿಲ್ಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸರ್ಕಾರಿ ಪ್ರಾಥಮಿಕ, ಪ್ರೌಢಶಾಲಾ ಶಿಕ್ಷಕರ ಸೇವಾ ಮಾಹಿತಿಯನ್ನು ವರ್ಗಾವಣೆ ಸಂಬಂಧ ಶಿಕ್ಷಕರ ಮಿತ್ರ(ಇಇಡಿಎಸ್) ತಂತ್ರಾಂಶ ದಲ್ಲಿ ಅಳವಡಿಸಲಾಗಿದ್ದು, ಶಿಕ್ಷಕರ ಹೆಸರು, ಕೆಜಿಐಡಿ ಸಂಖ್ಯೆ, ಜನ್ಮ ದಿನಾಂಕವನ್ನು ಈಗಾಗಲೇ ಅಳವಡಿಸಿದ್ದು, ಮಾರ್ಪಡಿಸಲು ಅವಕಾಶವಿರುವುದಿಲ್ಲ ಹಾಗೂ ಅಳವಡಿಸಲಾಗಿರುವ ಶಿಕ್ಷಕರ ಮೂಲ ಸೇವಾ ಮಾಹಿತಿಯನ್ನು ಶಿಕ್ಷಕರ ಮಿತ್ರ ತಂತ್ರಾಂಶದಲ್ಲಿ (sಣs.ಏಚಿಡಿಟಿಚಿಣಚಿಞಚಿ.gov.iಟಿ/ಇಇಆS) ಲಾಗಿನ್ ಹೊಂದಿ ತಮ್ಮ ಸೇವಾ ಮಾಹಿತಿಯನ್ನು ಪರಿಶೀಲಿಸಿ ಕೊಳ್ಳುವುದು. ಅಳವಡಿಸಲಾದ ಮಾಹಿತಿ ಯಲ್ಲಿ ತಪ್ಪುಗಳಿದ್ದಲ್ಲಿ ತಮ್ಮ ಕಚೇರಿಯ ಡಿಡಿಒಗಳನ್ನು ಸಂಪರ್ಕಿಸಿ ಮಾಹಿತಿ ಸರಿಪಡಿಸಲು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಪೆರಿಗ್ರಿನ್ ಎಸ್.ಮಚ್ಚಾಡೋ ಅವರು ತಿಳಿಸಿದ್ದಾರೆ.