ಗೋಣಿಕೊಪ್ಪವರದಿ, ಸೆ. 27: ಅಂತಾರಾಷ್ಟ್ರೀಯ ಹಾಕಿ ಆಟಗಾರ ಒಲಿಂಪಿಯನ್ ಸಣ್ಣುವಂಡ. ಕೆ ಉತ್ತಪ್ಪ ಪುಟ್ಟಿಚಂಡ ಸಂಜನಾ ಅವರೊಂದಿಗೆ ಭಾನುವಾರ ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಬಾಳಾಜಿ ಗ್ರಾಮದಲ್ಲಿರುವ ಯೆಲ್ಲೋ ಬ್ಯಾಂಬೂ ರೆಸಾರ್ಟ್‍ನಲ್ಲಿ ಆಯೋಜಿಸಿದ್ದ ಸರಳ ವಿವಾಹ ಕಾರ್ಯಕ್ರಮದಲ್ಲಿ ಎರಡು ಕಡೆಯ ಕುಟುಂಬಸ್ಥರು ಪಾಲ್ಗೊಂಡು ಶುಭ ಕೋರಿದರು.
ಮೂಲತಃ ಬೊಳ್ಳರಿಮಾಡ್ ಗ್ರಾಮದ ಪುಟ್ಟಿಚಂಡ ಉತ್ತಪ್ಪ, ಲೀಲಾ ದಂಪತಿ ಪುತ್ರಿ,ಬೆಂಗಳೂರಿನಲ್ಲಿ ಖಾಸಗಿ ಉದ್ಯೋಗದಲ್ಲಿರುವ ಸಂಜನಾಳೊಂದಿಗೆ ಶನಿವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಭಾನುವಾರ ಸಂಜೆ ದಂಪತಿ ಮುಹೂರ್ತದ ಮೂಲಕ ಹಸೆಮಣೆ ಏರಿದರು. ಉತ್ತಪ್ಪ ಅವರ ತಂದೆ ಸಣ್ಣುವಂಡ ಕುಶಾಲಪ್ಪ, ತಾಯಿ ನೀರಜ್ ಕುಶಾಲಪ್ಪ, ಸಹೋದರ ಚಿಣ್ಣಪ್ಪ ದಂಪತಿ ಸೇರಿದಂತೆ ಕುಟುಂಬಸ್ಥರು ಪಾಲ್ಗೊಂಡರು.