
ಮೂರು ವರ್ಷಗಳಾದವು; ಕೊಡಗಿನ ಬದುಕಿನ ರೀತಿ ಬದಲಾಗಿ. ಪ್ರವಾಹ - ಮಳೆ - ಭೂಕುಸಿತ - ಈ ವರ್ಷ ಕೊರೊನಾ. ವ್ಯಾಪಾರದ ಜೊತೆ ಕೃಷಿಯೂ ನೆಲ ಕಚ್ಚಿದೆ. ಈ ವರ್ಷದ ಸೆಪ್ಟೆಂಬರ್ ತಿಂಗಳಲ್ಲೂ ಸುರಿದ ಧಾರಾಕಾರ ಮಳೆ ಕೃಷಿಕರ ಬದುಕನ್ನು ಇನ್ನಷ್ಟು ಕೃಶ ಮಾಡಿದೆ. ಕಾಡುಪ್ರಾಣಿಗಳ ಹಾವಳಿಯೂ ಕೃಷಿಕರ ಬದುಕನ್ನು ಭಯದಲ್ಲಿ ದೂಡಿದೆ. ಕೊಡಗಿನ ಬೆಳೆಗಳಾದ ಕಾಫಿ, ಏಲಕ್ಕಿ, ಮೆಣಸು, ಕಿತ್ತಳೆ, ಮದೆನಾಡಿನಾಚೆಯ ತೆಂಗು, ರಬ್ಬರ್, ಅಡಿಕೆ, ಕೊಕೊ; ಕುಶಾಲನಗರ ವ್ಯಾಪ್ತಿಯ ಹೊಗೆಸೊಪ್ಪು, ಭತ್ತ, ಜೋಳ, ಮಿಶ್ರತಳಿಗಳು... ಹೀಗೆ ಎಲ್ಲಾ ಕೃಷಿ ಉತ್ಪಾದನೆಗಳೂ ಈ ಬಾರಿ ಬಳಲಿವೆ. ಈ ಬಗ್ಗೆ ‘ಶಕ್ತಿ’ ಬಳಗ ಜಿಲ್ಲೆಯ ವಿವಿಧೆಡೆ ಸಂಚರಿಸಿ, ವರದಿಗಾರರು, ಕೃಷಿಕರ ನೆರವಿನಿಂದ ವಾಸ್ತವ ಚಿತ್ರಣವನ್ನು ಬಿಂಬಿಸುವತ್ತ ಪ್ರಯತ್ನ ಮಾಡಿದೆ.
ನಾಳಿನ ಸಂಚಿಕೆಯಿಂದ ಈ ಕುರಿತ ಸರಣಿ ಲೇಖನ ಪ್ರಕಟಗೊಳ್ಳಲಿದೆ. ಕೃಷಿಕರು ಹೆಚ್ಚಿನ ಮಾಹಿತಿ ಇದ್ದಲ್ಲಿ ದಯವಿಟ್ಟು ಹಂಚಿಕೊಳ್ಳಿ.
- ಜಿ. ಚಿದ್ವಿಲಾಸ್
ಸಂಪಾದಕ