ಮಡಿಕೇರಿ, ಸೆ. 26: ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಗುತ್ತಿಗೆ ಹಾಗೂ ಹೊರಗುತ್ತಿಗೆ ನೌಕರರ ಸಂಘದ ಕರೆಯಂತೆ ವಿವಿಧ ಆರೋಗ್ಯ ಕೇಂದ್ರಗಳ ಈ ಸಿಬ್ಬಂದಿಗಳು ನಡೆಸುತ್ತಿರುವ ಕೆಲಸ ಸ್ಥಗಿತ ಮುಷ್ಕರ ಮುಂದುವರಿದಿದೆ. ಕೆಲಸ ನಿಲ್ಲಿಸಿ ಮನೆಗಳಲ್ಲೇ ಉಳಿದಿರುವ ಸಿಬ್ಬಂದಿಗಳು ಮುಷ್ಕರವನ್ನು ಬೇಡಿಕೆ ಈಡೇರುವ ತನಕ ಅನಿರ್ಧಿಷ್ಟಾವಧಿವರೆಗೆ ನಡೆಸಲಿದ್ದಾರೆ.

ರಾಜ್ಯವ್ಯಾಪಿಯಾಗಿ ಕರೆ ನೀಡಿರುವ ಪ್ರತಿಭಟನೆ ಜಿಲ್ಲೆಯಲ್ಲೂ ನಡೆಯುತ್ತಿದೆ ಎಂದು ಸಂಘದ ಜಿಲ್ಲಾ ಅಧ್ಯಕ್ಷ ಮಹದೇವ್ ತಿಳಿಸಿದ್ದಾರೆ. ಇದೀಗ ಪ್ರತಿಭಟನೆ ಇನ್ನಷ್ಟು ಕಾವು ಪಡೆಯುತ್ತಿದೆ. ಇತರ ಜಿಲ್ಲೆಗಳಲ್ಲಿ ಮುಷ್ಕರ ತೀವ್ರ ಸ್ವರೂಪ ಪಡೆಯುತ್ತಿದೆ ಎಂದಿರುವ ಅವರು, ರಾಜ್ಯ ಸಂಘದ ನಿರ್ದೇಶನದಂತೆ ನಡೆದು ಕೊಳ್ಳಲಾಗುವುದು. ಮುಷ್ಕರ ಕೈಬಿಡಲಾಗಿದೆ ಎಂಬ ಮಾಹಿತಿ ಸರಿಯಲ್ಲ ಎಂದು ತಿಳಿಸಿದ್ದಾರೆ.