ಮಡಿಕೇರಿ, ಸೆ. 26: ತಾ. 28 ರಂದು ವಿವಿಧ ರೈತ ಸಂಘಗಳು ಮತ್ತು ಇತರ ಸಂಘಟನೆಗಳಿಂದ ರಾಜ್ಯವ್ಯಾಪ್ತಿ ಬಂದ್ಗೆ ಕರೆ ನೀಡಿರುವುದರಿಂದ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ತಾ. 28 ರಂದು ನಡೆಯಬೇಕಾಗಿದ್ದ ವಿಜ್ಞಾನ, ರಾಜ್ಯಶಾಸ್ತ್ರ ಮತ್ತು ಕರ್ನಾಟಕ ಸಂಗೀತ, ಹಿಂದೂಸ್ಥಾನಿ ಸಂಗೀತ ವಿಷಯಗಳ ಪರೀಕ್ಷೆಯನ್ನು ತಾ. 29ಕ್ಕೆ ಮುಂದೂಡಲಾಗಿದೆ ಎಂದು ಪ್ರೌಢ ಶಿಕ್ಷಣ ಮಂಡಳಿ ಪ್ರಕಟಣೆ ತಿಳಿಸಿದೆ.