ಕೂಡಿಗೆ, ಸೆ. 25: ಪರಿಶಿಷ್ಟ ಜಾತಿಯಲ್ಲಿ ಬರುವ ಉಪ ಜಾತಿಗಳಿಗೆ ಈಗಿರುವ ಮೀಸಲಾತಿಯನ್ನು ಆಯಾಯ ಜಾತಿ ಜನಸಂಖ್ಯೆಗೆ ಅನುಗುಣವಾಗಿ ಹಂಚಿಕೆ ಮಾಡಬೇಕೆಂದು ತಾಲೂಕು ಆದಿಜಾಂಭವ ಸಂಘದ ವತಿಯಿಂದ ಕುಶಾಲನಗರ ಉಪ ತಹಶೀಲ್ದಾರರ ಮೂಲಕ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಕಾರ್ಯದರ್ಶಿ ಸುಂದರ್ ದಾಸ್, ಶಿವಣ್ಣ ಕೆ.ಸಿ. ಶೇಖರ್, ವರದರಾಜದಾಸ್, ಟಿ.ಪಿ. ಹರೀಶ್, ರವಿ, ಸಂತೋಷ್, ಚೆಲುವರಾಜ, ಪದಾಧಿಕಾರಿಗಳು ಹಾಜರಿದ್ದರು.