ಮಡಿಕೇರಿ, ಸೆ. 25: ಜಿಲ್ಲೆಯಲ್ಲಿ ಕೋವಿಡ್ ಸಂಬಂಧ ಮತ್ತೊಂದು ಸಾವು ಸಂಭವಿಸಿದ್ದು, ಮೃತಪಟ್ಟವರ ಸಂಖ್ಯೆ 33ಕ್ಕೇರಿದೆ. ಶಿರಂಗಾಲ ಗ್ರಾಮದ 65 ವರ್ಷದ ಪುರುಸರೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಲ್ಲಿ ಹೊಸದಾಗಿ 62 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಇದುವರೆಗೆ 2496 ಪ್ರಕರಣಗಳು ಪತ್ತೆಯಾಗಿದ್ದು, 2069 ಮಂದಿ ಗುಣಮುಖರಾಗಿದ್ದಾರೆ. 394 ಪ್ರಕರಣಗಳು ಸಕ್ರಿಯವಾಗಿವೆ. ಸೋಂಕಿತರ ಪೈಕಿ 74 ಮಂದಿ ಕೋವಿಡ್ ಆಸ್ಪತ್ರೆಯಲ್ಲಿ, ಕೋವಿಡ್ ಕೇರ್ ಸೆಂಟರ್‍ನಲ್ಲಿ 60 ಮಂದಿ ಹಾಗೂ ಹೋಮ್ ಐಸೋಲೇಷನ್‍ನಲ್ಲಿ 260 ಮಂದಿ ದಾಖಲಾಗಿದ್ದಾರೆ. ಜಿಲ್ಲೆಯಾದ್ಯಂತ 376 ನಿಯಂತ್ರಿತ ವಲಯಗಳಿವೆ.

ಹೊಸ ಪ್ರಕರಣಗಳ ವಿವರ

ವೀರಾಜಪೇಟೆ ಪಾಲಂಗಾಲದ 29 ವರ್ಷದ ಮಹಿಳೆ ಮತ್ತು 30 ವರ್ಷದ ಪುರುಷ, ಸೋಮವಾರಪೇಟೆ ಅಭ್ಯತ್‍ಮಂಗಲ ಗ್ರಾಮದ 42 ವರ್ಷದ ಪುರುಷ ಮತ್ತು 31 ವರ್ಷದ ಮಹಿಳೆ, ಗೋಣಿಕೊಪ್ಪ ಅಚ್ಚಪ್ಪ ಲೇಔಟ್‍ನ 3ನೇ ಬ್ಲಾಕ್‍ನ 38 ವರ್ಷದ ಮಹಿಳೆ ಮತ್ತು 43 ವರ್ಷದ ಪುರುಷ, ಕುಶಾಲನಗರ ಮುಳ್ಳುಸೋಗೆ ಕುವೆಂಪು ಬಡಾವಣೆಯ 73 ವರ್ಷದ ಮಹಿಳೆ, ಕುಶಾಲನಗರ ಸರ್ಕಾರಿ ಆಸ್ಪತ್ರೆ ಎದುರಿನ ಸೋಮೇಶ್ವರ ದೇವಾಲಯ ಸಮೀಪದ 75 ವರ್ಷದ ಪುರುಷ ಮತ್ತು 58 ವರ್ಷದ ಮಹಿಳೆ, ಸೋಮವಾರಪೇಟೆ ಗೌಡಳ್ಳಿ ನಂದಿ ಗುಂಡಿಯ 62 ವರ್ಷದ ಪುರುಷ, ಸುಂಟಿಕೊಪ್ಪ ಬಿ.ಎಂ ರಸ್ತೆಯ ಕೆ.ಇ.ಬಿ ಸಮೀಪದ 44 ವರ್ಷದ ಪುರುಷ, ಮಡಿಕೇರಿ ತಾಳತ್ತಮನೆಯ ಕೂರ್ಗ್ ಐಸ್ ರೆಸಾರ್ಟ್ ಎದುರಿನ 55 ವರ್ಷದ ಪುರುಷ, ಚೆಯ್ಯಂಡಾಣೆಯ ಚೆಕ್ಕಾವರ ಗ್ರಾಮದ 26 ವರ್ಷದ ಪುರುಷ, ಚೇರಂಬಾಣೆ ಚೆಟ್ಟಿಮಾನಿ ದೇವಾಲಯ ಸಮೀಪದ 41 ವರ್ಷದ ಪುರುಷ, ಕುಶಾಲನಗರ ಬಿ.ಎಂ ರಸ್ತೆಯ ವೆಂಕಟೇಶ್ವರ ಸಿನಿಮಾ ಮಂದಿರ ಎದುರಿನ 83 ವರ್ಷದ ಮಹಿಳೆ, ನಾಪೆÇೀಕ್ಲುವಿನ ಬೇತು ಮಕ್ಕಿ ದೇವಾಲಯ ಸಮೀಪದ 65 ವರ್ಷದ ಪುರುಷ, ಮಡಿಕೇರಿ ಸುಬ್ರಮಣ್ಯ ನಗರದ 58 ವರ್ಷದ ಪುರುಷ, ವೀರಾಜಪೇಟೆ ಶಿವಕೇರಿ ಕೊಡವ ಸಮಾಜ ಸಮೀಪದ 65 ವರ್ಷದ ಪುರುಷ, ವೀರಾಜಪೇಟೆ ಕಡಂಗ ಮರೂರು ಗ್ರಾಮ ಮತ್ತು ಅಂಚೆಯ 76 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 55 ವರ್ಷದ ಪುರುಷ, ಪಾಲಿಬೆಟ್ಟ ಶಾಸ್ತ್ರಿ ಹಳ್ಳಿಯ ಸರ್ಕಾರಿ ಆಸ್ಪತ್ರೆ ಸಮೀಪದ 58 ವರ್ಷದ ಮಹಿಳೆ, ವೀರಾಜಪೇಟೆ ಕಾಕೋಟುಪರಂಬು ಗ್ರಾಮ ಬಿ.ಎಸ್.ಎನ್.ಎಲ್ ಟವರ್ ಸಮೀಪದ 42 ವರ್ಷದ ಪುರುಷ ಮತ್ತು 65 ವರ್ಷದ ಮಹಿಳೆ, ಸಿದ್ದಾಪುರ ಆರೆಂಜ್ ಕೌಂಟಿಯ 33 ವರ್ಷದ ಪುರುಷ, ನೆಲ್ಲಿಹುದಿಕೇರಿ ನಲವತ್ತೆಕ್ರೆಯ 30 ವರ್ಷದ ಮಹಿಳೆ, ಟಿ.ಶೆಟ್ಟಿಗೇರಿ ಹರಿಹರ ಗ್ರಾಮ ಮತ್ತು ಅಂಚೆಯ 35 ವರ್ಷದ ಪುರುಷ, ಸೋಮವಾರಪೇಟೆ ಗೌಡಳ್ಳಿ ಯಡವನಪುರದ 31 ವರ್ಷದ ಮಹಿಳೆ, ನಾಪೆÇೀಕ್ಲು ಕೊಳಕೇರಿ ಗ್ರಾಮ ಮತ್ತು ಅಂಚೆಯ 10 ಹಾಗೂ 1 ವರ್ಷದ ಬಾಲಕಿಯರು, ನಾಪೆÇೀಕ್ಲುವಿನ ಇಂದಿರಾನಗರದ 70 ವರ್ಷದ ಮಹಿಳೆ, ಸೋಮವಾರಪೇಟೆ ಅಭ್ಯತ್ ಮಂಗಲದ 03 ವರ್ಷದ ಬಾಲಕ, ಮಡಿಕೇರಿ ಜೂನಿಯರ್ ಕಾಲೇಜು ಮ್ಯಾನ್ಸ್ ಕಾಂಪೌಂಡ್ ಸಮೀಪದ 45 ವರ್ಷದ ಪುರುಷ, ಚೆಟ್ಟಳ್ಳಿಯ ಕೋಟೆಗೇರಿ ಎಸ್ಟೇಟ್ ನ 67 ವರ್ಷದ ಪುರುಷ, ಕುಶಾಲನಗರ ಕುವೆಂಪು ಬಡಾವಣೆಯ 17 ವರ್ಷದ ಬಾಲಕ, ಮೂರ್ನಾಡು ಗಾಂಧೀನಗರದ 60 ವರ್ಷದ ಪುರುಷ ಮತ್ತು 55 ವರ್ಷದ ಮಹಿಳೆ, ಕುಶಾಲನಗರ ಬಸವನಹಳ್ಳಿಯ 67 ವರ್ಷದ ಪುರುಷ, ಸುಂಟಿಕೊಪ್ಪ ಪಂಪ್ ಹೌಸ್ ಸಮೀಪದ 22 ವರ್ಷದ ಪುರುಷ, ಸೋಮವಾರಪೇಟೆ ಮಾಲಂಬಿ ಅಂಚೆಯ ಹೊಸಗುತ್ತಿ ಗ್ರಾಮದ 62 ವರ್ಷದ ಪುರುಷ, ಸೋಮವಾರಪೇಟೆ ಚೌಡ್ಲುವಿನ ಟೈರ್ ವರ್ಕ್ ಶಾಪ್ ಸಮೀಪದ 40 ವರ್ಷದ ಮಹಿಳೆ, ಸೋಮವಾರಪೇಟೆ ಅಡಿನದೂರುವಿನ 35 ವರ್ಷದ ಪುರುಷ, ಸೋಮವಾರಪೇಟೆ ತಣ್ಣೀರುಹಳ್ಳ ಸರ್ಕಾರಿ ಶಾಲೆ ಎದುರಿನ 53 ವರ್ಷದ ಮಹಿಳೆ, ಸೋಮವಾರಪೇಟೆ ಮಹದೇಶ್ವರ ಬ್ಲಾಕ್ ನ 53 ವರ್ಷದ ಮಹಿಳೆ, ಸೋಮವಾರಪೇಟೆ ನಂದಿಗುಂದದ 43 ವರ್ಷದ ಪುರುಷ, ವೀರಾಜಪೇಟೆ ಶಿವಕೇರಿಯ ಕೊಡವ ಸಮಾಜ ಸಮೀಪದ 59 ವರ್ಷದ ಮಹಿಳೆ, ಬಿಟ್ಟಂಗಾಲ ಅಂಬಟ್ಟಿ ಗ್ರಾಮದ ಡಿಎಂಪಿ ಶಾಲೆ ಬಳಿಯ 62 ವರ್ಷದ ಪುರುಷ, ವೀರಾಜಪೇಟೆ ಮೀನುಪೇಟೆಯ ಪೆÇಲೀಸ್ ವಸತಿಗೃಹದ 46 ವರ್ಷದ ಮಹಿಳೆ, ವಾಲ್ನೂರು ಗ್ರಾಮದ ತ್ಯಾಗತ್ತೂರು ಕಾಲೋನಿಯ 21 ವರ್ಷದ ಮಹಿಳೆ, ಪಿರಿಯಾಪಟ್ಟಣದ 26 ವರ್ಷದ ಪುರುಷ, ಪೆÇನ್ನಂಪೇಟೆ ಹಳ್ಳಿಗಟ್ಟು ಗಣಪತಿ ನಗರದ 28 ವರ್ಷದ ಮಹಿಳೆ, ಮಡಿಕೇರಿ ಮೆಡಿಕಲ್ ಕಾಲೇಜು ಭೋಧಕೇತರ ಸಿಬ್ಬಂದಿ ವಸತಿಗೃಹದ 24 ವರ್ಷದ ಪುರುಷ, ಮೇಕೇರಿಯ 1ನೇ ಮೈಲಿನ 41 ವರ್ಷದ ಪುರುಷ, ಮಡಿಕೇರಿ ಹೊಟೇಲ್ ತಾಜ್ ನ 22 ವರ್ಷದ ಪುರುಷ, ಜಂಬೂರು ಮಾದಾಪುರದ 41 ವರ್ಷದ ಮಹಿಳೆ, ಸೋಮವಾರಪೇಟೆ ರೇಂಜರ್ ಬ್ಲಾಕ್ ನ 26 ವರ್ಷದ ಮಹಿಳೆ, ಸುಂಟಿಕೊಪ್ಪ ನಾಕೂರು ಗ್ರಾಮದ 78 ವರ್ಷದ ಮಹಿಳೆ, ಚೆಟ್ಟಳ್ಳಿ ಗ್ರಾಮದ 44 ವರ್ಷದ ಪುರುಷ, ಸೋಮವಾರಪೇಟೆ ಮಾದಾಪುರ ಜಂಬೂರು ಗ್ರಾಮದ 63 ವರ್ಷದ ಪುರುಷ, ಮಡಿಕೇರಿ ಹೆಬ್ಬೆಟ್ಟಗೇರಿಯ ಕೆ.ನಿಡುಗಣೆಯ 40 ವರ್ಷದ ಮಹಿಳೆ, ಮಡಿಕೇರಿ ತಾಳತ್ತಮನೆಯ ಮಂಜುಶ್ರೀ ಹೋಂಸ್ಟೇ ಸಮೀಪದ 42 ವರ್ಷದ ಪುರುಷ, ಮಡಿಕೇರಿ ಸುದರ್ಶನ್ ಅತಿಥಿ ಗೃಹ ಎದುರಿನ 56 ವರ್ಷದ ಪುರುಷ, ಕೊಳಕೇರಿ ಗ್ರಾಮದ ಉಮಾ ಮಹೇಶ್ವರಿ ದೇವಾಲಯ ಸಮೀಪದ 25 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ.