ಮಡಿಕೇರಿ, ಸೆ. 25: ಶ್ರೀಮಂಗಲ ಪೊಲೀಸ್ ಠಾಣಾ ವ್ಯಾಪ್ತಿಯ ಪರಕಟಗೇರಿ ನಿವಾಸಿ ಕೆ. ಪೊನ್ನಪ್ಪ ಎಂಬವರ ತೋಟದ ಕಾರ್ಮಿಕ ಮಹಿಳೆ ಪಿ.ಎ. ಮೋಟಿ (35) ಎಂಬಾಕೆ ತಾ. 15 ರಿಂದ ಕಾಣೆಯಾಗಿದ್ದು, ಈಕೆಯ ಕುರಿತು ಮಾಹಿತಿ ಲಭಿಸಿದರೆ 08274-246246 ಅಥವಾ 08274-24435ಗೆ ಸಂಪರ್ಕಿಸಬಹುದಾಗಿದೆ. ಪ್ರಕರಣ ಸಂಬಂಧ ಶ್ರೀಮಂಗಲ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.