ಶನಿವಾರಸಂತೆ, ಸೆ. 25: ಶನಿವಾರಸಂತೆ ಪಟ್ಟಣದ ರಸ್ತೆಯಲ್ಲಿ ಮಾಸ್ಕ್ ಧರಿಸದವರಿಗೆ, ಬೈಕ್ ಸವಾರರು ಹೆಲ್ಮೆಟ್ ಧರಿಸದೆ ಇದ್ದವರಿಗೆ, ವಾಹನಗಳ ಚಾಲಕರು ಇನ್ಶೂರೆನ್ಸ್ ಕಟ್ಟದೆ ಇದ್ದವರಿಗೆ ಶನಿವಾರಸಂತೆ ಪೊಲೀಸ್ ಠಾಣಾಧಿಕಾರಿ ಹೆಚ್.ಇ. ದೇವರಾಜ್ ದಂಡ ವಿಧಿಸಿದರು.
ಕಾರ್ಯಾಚರಣೆಯಲ್ಲಿ ಠಾಣಾಧಿಕಾರಿ ದೇವರಾಜ್, ಸಿಬ್ಬಂದಿಗಳಾದ ಹರೀಶ್, ವಿವೇಕ್, ವಿನಯ, ಚೆನ್ನಕೇಶವ, ಶಫೀರ್ ಪಾಲ್ಗೊಂಡಿದ್ದರು.