ಮಡಿಕೇರಿ, ಸೆ. 25: ಕೊಡಗು ಜಿಲ್ಲೆಯಲ್ಲಿ ಅಂದಾಜು 500 ರಿಂದ 600 ರಷ್ಟು ಕಾಡಾನೆಗಳು ಇದ್ದು, ನಿರಂತರ ಸಮಸ್ಯೆ ತಂದೊಡ್ಡುತ್ತಿರುವ ಎರಡು ಪುಂಡಾನೆಗಳನ್ನು ಸೆರೆಹಿಡಿ ಯಲು ಕರ್ನಾಟಕ ಸರಕಾರದಿಂದ ಅನುಮೋದನೆ ಲಭಿಸಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರ್ ಮಾಹಿತಿ ನೀಡಿದ್ದಾರೆ. ‘ಶಕ್ತಿ’ ಸಂದರ್ಶನದಲ್ಲಿ ಈ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಿರಂತರ ಕಾಫಿ ತೋಟಗಳಲ್ಲಿ ಸಂಚರಿಸುತ್ತಾ, ಜನರ ಪ್ರಾಣಕ್ಕೆ ಕುತ್ತು ತಂದಿರುವ ಈ ಎರಡು ಸಲಗಗಳನ್ನು ಮಳೆ ಇಳಿಮುಖಗೊಂಡ ಬೆನ್ನಲ್ಲೇ ಶೀಘ್ರದಲ್ಲಿ ಸೆರೆಹಿಡಿಯಲು ಕಾರ್ಯಾಚರಣೆ ಕೈಗೊಳ್ಳುವದಾಗಿ ವಿವರಿಸಿದರು.

ಸೆರೆಹಿಡಿಯಲು ಕರ್ನಾಟಕದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳಿಂದ ಈಗಾಗಲೇ ಎರಡು ಪುಂಡಾನೆಗಳ ಬಗ್ಗೆ ಒಪ್ಪಿಗೆಯಿದ್ದು, ಒಂದು ಸಿದ್ದಾಪುರ ವ್ಯಾಪ್ತಿಯಲ್ಲಿ ತೊಂದರೆ ನೀಡುತ್ತಿದೆ ಎಂದರಲ್ಲದೆ, ಇನ್ನೊಂದು ಸುಂಟಿಕೊಪ್ಪ ವ್ಯಾಪ್ತಿಯ ಮೋದೂರು ಸರಹದ್ದಿನ ತೋಟದಲ್ಲಿ ಬೆಳೆಗಾರ ಮಹಿಳೆಯೊಬ್ಬರ ಬಲಿ ಪಡೆದಿದ್ದಾಗಿ ನೆನಪಿಸಿದರು.

81/2 ಕಿ.ಮೀ. ಬ್ಯಾರಿಕೇಡ್: ಕಾಡಾನೆಗಳು ಕಾಫಿ ತೋಟಗಳಲ್ಲಿ ಉಪಟಳ ನೀಡುತ್ತಿರುವ ಬಗ್ಗೆ ತಡೆಯೊಡ್ಡುವ ಸಲುವಾಗಿ, ಕಾವೇರಿ ಹೊಳೆ ದಂಡೆಯ ಸುಮಾರು 8.5 ಕಿ.ಮೀ. ರೈಲ್ವೇ ಕಂಬಿಗಳಿಂದ ಬ್ಯಾರಿಕೇಡ್ ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಶೀಘ್ರದಲ್ಲೇ ಈ ಕೆಲಸ ಪೂರೈಸಲಾಗುವದು ಎಂದು ಅಧಿಕಾರಿ ಪ್ರಭಾಕರ್ ವಿವರಿಸಿದರು. ಈ ಬಗ್ಗೆ ಸಂರಕ್ಷಣಾಧಿಕಾರಿಗಳಿಂದ ಈಗಾಗಲೇ ಎರಡು ಪುಂಡಾನೆಗಳ ಬಗ್ಗೆ ಒಪ್ಪಿಗೆಯಿದ್ದು, ಒಂದು ಸಿದ್ದಾಪುರ ವ್ಯಾಪ್ತಿಯಲ್ಲಿ ತೊಂದರೆ ನೀಡುತ್ತಿದೆ ಎಂದರಲ್ಲದೆ, ಇನ್ನೊಂದು ಸುಂಟಿಕೊಪ್ಪ ವ್ಯಾಪ್ತಿಯ ಮೋದೂರು ಸರಹದ್ದಿನ ತೋಟದಲ್ಲಿ ಬೆಳೆಗಾರ ಮಹಿಳೆಯೊಬ್ಬರ ಬಲಿ ಪಡೆದಿದ್ದಾಗಿ ನೆನಪಿಸಿದರು.

81/2 ಕಿ.ಮೀ. ಬ್ಯಾರಿಕೇಡ್: ಕಾಡಾನೆಗಳು ಕಾಫಿ ತೋಟಗಳಲ್ಲಿ ಉಪಟಳ ನೀಡುತ್ತಿರುವ ಬಗ್ಗೆ ತಡೆಯೊಡ್ಡುವ ಸಲುವಾಗಿ, ಕಾವೇರಿ ಹೊಳೆ ದಂಡೆಯ ಸುಮಾರು 8.5 ಕಿ.ಮೀ. ರೈಲ್ವೇ ಕಂಬಿಗಳಿಂದ ಬ್ಯಾರಿಕೇಡ್ ನಿರ್ಮಾಣಕ್ಕೆ ತಯಾರಿ ನಡೆದಿದ್ದು, ಶೀಘ್ರದಲ್ಲೇ ಈ ಕೆಲಸ ಪೂರೈಸಲಾಗುವದು ಎಂದು ಅಧಿಕಾರಿ ಪ್ರಭಾಕರ್ ವಿವರಿಸಿದರು. ಈ ಬಗ್ಗೆ ಭೇಟಿ ಅವಕಾಶ ಕಲ್ಪಿಸಲಾಗಿದೆ. ದುಬಾರೆ ಆನೆ ಶಿಬಿರದಲ್ಲಿ ಅವುಗಳನ್ನು ಜನರು ಹತ್ತಿರದಿಂದ ಮುಟ್ಟದಂತೆ ಕ್ರಮಕೈಗೊಳ್ಳಲಾಗಿದೆ. ಅಲ್ಲದೆ ನಿಸರ್ಗಧಾಮದಲ್ಲಿ ಶಿಥಿಲಗೊಂಡಿರುವ ತೂಗುಸೇತುವೆಯ ನವೀಕರಣಕ್ಕೆ ಪ್ರವಾಸೋದ್ಯಮ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.

ಕೋರಿಕೆಯಂತೆ ಅವಕಾಶ : ಪ್ರಸ್ತುತ ಮೈಸೂರು ದಸರಾ ಅಂಬಾರಿಯೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಸರಕಾರದ ಕೋರಿಕೆ ಯಂತೆ ಅಭಿಮನ್ಯು ನೇತೃತ್ವದಲ್ಲಿ ಗಜಪಡೆ ಕಳುಹಿಸಿಕೊಟ್ಟಿದ್ದು, ಅವುಗಳ ಉಸ್ತುವಾರಿಯೊಂದಿಗೆ ಮಾವುತರ ಬಗ್ಗೆ ಮೈಸೂರಿನಲ್ಲಿರುವ ಇಲಾಖೆಯ ಸಂಬಂಧಿಸಿದ ಅಧಿಕಾರಿಗಳು ಮತ್ತು ಸಿಬ್ಬಂದಿ ಗಮನ ಹರಿಸಲಿದ್ದಾರೆ ಎಂದು ಅವರು ವಿವರಿಸಿದರು.