ವೀರಾಜಪೇಟೆ, ಸೆ. 23: ವೀರಾಜಪೇಟೆ ತಾಲೂಕು ಕಾಕೋಟುಪರಂಬು ಹೋಬಳಿಯ ಬಿಜೆಪಿ ಕೃಷಿ ಯುವ ಮೋರ್ಚಾದ ಅಧ್ಯಕ್ಷರಾಗಿ ನೆಲ್ಲಮಕ್ಕಡ ಪವನ್ ಮುತ್ತಪ್ಪನವರು ಇಂದು ನಡೆದ ಕೃಷಿ ಯುವ ಮೋರ್ಚಾ ಸಭೆಯಲ್ಲಿ ತಾಲೂಕು ಕೃಷಿ ಮೋರ್ಚಾ ಅಧ್ಯಕ್ಷರಾದ ಕಟ್ಟೆರ ಈಶ್ವರ ಮತ್ತು ಸದಸ್ಯರು ಮತ್ತು ಮೂರು ಗ್ರಾಮಸ್ಥರ ಸಮ್ಮುಖದಲ್ಲಿ ಅವಿರೋಧವಾಗಿ ಆಯ್ಕೆಯಾದರು. ಈ ಸಮಿತಿಯ ಪರಿಮಿತಿಗೆ ಕಡಂಗಮರೂರು ಮತ್ತು ಬೊಳ್ಳುಮಾಡು ಸೇರಿರುತ್ತದೆ.

ಸಮಿತಿಗೆ ಆಯ್ಕೆಯಾದ ಇತರರು : ಪಾಲೇಕಂಡ ಪ್ರವೀಣ್, ಉಪಾಧ್ಯಕ್ಷರು ಪಿ.ಎಂ. ಕಾವೇರಪ್ಪ, ಪ್ರಧಾನ ಕಾರ್ಯದರ್ಶಿ ಅಮ್ಮಂಡ ಈರಪ್ಪ, ಕಾರ್ಯದರ್ಶಿ ಕೋಟೆರ ಉದಯ್ ಪೂಣಚ್ಚ ಹಾಗೂ ಸದಸ್ಯರುಗಳಾಗಿ ಮೇವಡ ಗಣೇಶ್, ಅಲ್ಲಪಿರ ತನು ಅಪ್ಪಯ್ಯ, ಎಂ.ಪಿ. ದೇವಯ್ಯ, ಬಿ.ಸಿ. ಲೋಕೇಶ್, ಮಂಡೆಪ್ಪಂಡ ಮುತ್ತಪ್ಪ, ಪಳೆಯಂಡ ರವಿ, ಬಂಟರ ಲೀಲಾದರ ರೈ, ವೀರಾಜಪೇಟೆ ತಾಲೂಕು ಕೃಷಿ ಯುವ ಮೋರ್ಚಾ ಅಧ್ಯಕ್ಷ ಕಟ್ಟೆರ ಈಶ್ವರ ಅವರ ಸಮುಖದಲ್ಲಿ ಮಂಡೇಟಿರ ಪೆಮ್ಮಯ್ಯನವರ ಅಧ್ಯಕ್ಷತೆಯಲ್ಲಿ

ಶ್ರೀ ಕಾಕೋಟಿಶ್ವರ ದೇವಸ್ಥಾನದ ಸಭಾಂಗಣದಲ್ಲಿ ಸಭೆಯು ನಡೆಯಿತು. ಸಭೆಯಲ್ಲಿ ಕಾಕೋಟುಪರಂಬು, ಕಡಂಗಮರೂರು ಮತ್ತು ಬೊಳ್ಳುಮಾಡು ಗ್ರಾಮಸ್ಥರು ಪಾಲ್ಗೊಂಡಿದ್ದರು.