ಸೋಮವಾರಪೇಟೆ, ಸೆ. 23: ಮನೆಯಿಂದ ಕಲ್ಲುಕೋರೆ ಕೆಲಸಕ್ಕೆ ತೆರಳಿದ ವ್ಯಕ್ತಿಯೋರ್ವರು ನಾಪತ್ತೆಯಾಗಿರುವ ಬಗ್ಗೆ ಸೋಮವಾರಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಚೌಡ್ಲು ಗ್ರಾಮದ ರಾಜಣ್ಣ ಅವರ ಬಾಡಿಗೆ ಮನೆಯಲ್ಲಿ ವಾಸವಿರುವ ಸುಬ್ರಮಣಿ (34) ಅವರು ತಾ. 19 ರಂದು ಚೌಡ್ಲು ಗ್ರಾಮದ ನತೀಶ್ ಅವರ ಕಲ್ಲುಕೋರೆಗೆ ಕೆಲಸಕ್ಕೆಂದು ತೆರಳಿದವರು, ನಂತರ ವಾಪಸ್ ಆಗಿಲ್ಲ ಎಂದು ಪತ್ನಿ ಅಂಜಲಿ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಇವರ ಬಗ್ಗೆ ಮಾಹಿತಿ ಇದ್ದಲ್ಲಿ ಸೋಮವಾರಪೇಟೆ ಪೊಲೀಸ್ ಠಾಣೆ ದೂ: 08276-282040 ಸಂಖ್ಯೆಗೆ ತಿಳಿಸುವಂತೆ ಠಾಣಾಧಿಕಾರಿ ಶಿವಶಂಕರ್ ಮನವಿ ಮಾಡಿದ್ದಾರೆ.