ನಾಪೆÇೀಕ್ಲು, ಸೆ. 23: ಬಿ.ಜೆ.ಪಿ. ಕಾರ್ಯಕರ್ತರು ನಾಪೆÇೀಕ್ಲು ಭಗವತಿ ಸಮುದಾಯ ಭವನದಲ್ಲಿ ಸಭೆ ಸೇರಿ ಬಿ.ಜೆ.ಪಿ.ಯ ಹೋಬಳಿ ಮಟ್ಟದಲ್ಲಿ ನೂತನವಾಗಿ ಶಕ್ತಿ ಕೇಂದ್ರ ಸ್ಥಾಪಿಸಲಾಗಿ ಇದಕ್ಕಾಗಿ ನೂತನ ನಾಯಕನನ್ನು ಆಯ್ಕೆ ಮಾಡಲಾಯಿತು.

ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೂತನ ಪ್ರಮುಖ್‍ರಾಗಿ ಶಿವಚಾಳಿಯಂಡ ಅಂಬಿ ಕಾರ್ಯಪ್ಪ ಮತ್ತು ಸಹ ಪ್ರಮುಖ್ ಆಗಿ ಕೆಲೇಟೀರ ದೀಪು ದೇವಯ್ಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭ ಬೂತ್ ಮಟ್ಟದಲ್ಲಿ ಸಮಿತಿಯನ್ನು ರಚಿಸಿ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು. ಈ ಸಂದರ್ಭ ಬಿ.ಜೆ.ಪಿ.ಯ ಹಿರಿಯ ಮುಖಂಡ ಬಿದ್ದಾಟಂಡ ರಮೇಶ್ ಚಂಗಪ್ಪ, ಕುಂಡ್ಯೂಳಂಡ ರಮೇಶ್ ಮುದ್ದಯ್ಯ, ಜಿಲ್ಲಾ ಪಂಚಾಯಿತಿ ಸದಸ್ಯ ಮುರುಳಿಧರ್ ಕರುಂಬಮ್ಮಯ್ಯ, ಕಾಂಗೀರ ಸತೀಶ್, ಶಿವಚಾಳಿಯಂಡ ಜಗದೀಶ್, ಹೇಮಂತ್ ತೊರೇರ, ಗಿರೀಶ್, ಪಾಡಿಯಮ್ಮಂಡ ಮನು ಮಹೇಶ್, ಬೊಪ್ಪಂಡ ಬೊಳ್ಳಮ್ಮ ನಾಣಯ್ಯ, ಕಂಗಾಂಡ ಜಾಲಿ ಪೂವಪ್ಪ, ಗಿರೀಶ್ ಮತ್ತಿತರರು ಇದ್ದರು.

ನಾಪೆÇೀಕ್ಲು, ಸೆ. 23: ಬಲ್ಲಮಾವಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜೆಪಿ ಶಕ್ತಿ ಕೇಂದ್ರದ ಸಂಘಟನಾ ಸಭೆ ಬಲ್ಲಮಾವಟಿಯಲ್ಲಿ ನಡೆಯಿತು. ಈ ಸಂದರ್ಭ ಶಕ್ತಿ ಕೇಂದ್ರದ ನೂತನ ಸಂಚಾಲಕರಾಗಿ ಚಂಗೇಟಿರ ಕುಮಾರ್ ಸೋಮಣ್ಣ, ಸಹ ಸಂಚಾಲಕರಾಗಿ ಮಣವಟ್ಟಿರ ದೀಪಕ್ ಅವರನ್ನು ಆಯ್ಕೆ ಮಾಡಲಾಯಿತು.

ರಾಜ್ಯ ಬಿಜೆಪಿ ಮಾಜಿ ಕಾರ್ಯದರ್ಶಿ ಅಪ್ಪಚೆಟ್ಟೋಳಂಡ ಮನು ಮುತ್ತಪ್ಪ, ತಾಲೂಕು ಸಮಿತಿ ಉಪಾಧ್ಯಕ್ಷೆ ಕರವಂಡ ಸರಸು, ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ತಾಲೂಕು ಪಂಚಾಯಿತಿ ಸದಸ್ಯೆ ಕೋಡಿಯಂಡ ಇಂದಿರಾ, ನೆಲಜಿ ಬೂತ್ ಸಮಿತಿ ಅಧ್ಯಕ್ಷ ಮಾಳೆಯಂಡ ವಿಜು ಅಪ್ಪಚ್ಚ, ಪೇರೂರು ಸಮಿತಿ ಅಧ್ಯಕ್ಷ ಮೂವೆರ ಪಟ್ಟು ಪೆಮ್ಮಯ್ಯ, ಬಲ್ಲಮಾವಟಿ ಬೂತ್ ಸಮಿತಿ ಅಧ್ಯಕ್ಷ ನುಚ್ಚುಮಣಿಯಂಡ ಚಿಂಗಪ್ಪ, ಮತ್ತಿತರರು ಇದ್ದರು.