ಸೋಮವಾರಪೇಟೆ, ಸೆ. 23: ತಾಲೂಕಿನ ಯಲಕನೂರು ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಶ್ರೀ ಬೀರೆದೇವರು ಹಾಗೂ ಮಹಾಲಿಂಗೇಶ್ವರ ದೇವಾಲಯ ನಿರ್ಮಾಣಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ರೂ. 1 ಲಕ್ಷ ನೆರವು ನೀಡಲಾಯಿತು.

ನೆರವಿನ ಡಿ.ಡಿ.ಯನ್ನು ಯೋಜನೆಯ ತಾಲೂಕು ಯೋಜನಾಧಿಕಾರಿ ವೈ. ಪ್ರಕಾಶ್ ಅವರು, ದೇವಾಲಯ ಸಮಿತಿ ಉಪಾಧ್ಯಕ್ಷ ದಿನೇಶ್ ಹಾಗೂ ಕಾರ್ಯದರ್ಶಿ ಪ್ರಸನ್ನ ಅವರಿಗೆ ಹಸ್ತಾಂತರಿಸಿದರು. ಈ ಸಂದರ್ಭ ಯೋಜನೆಯ ಮೇಲ್ವಿಚಾರಕ ರವಿಪ್ರಸಾದ್ ಆಲಾಜೆ, ಸೇವಾ ಪ್ರತಿನಿಧಿ ಶೈಲ, ದೇವಾಲಯ ಸಮಿತಿಯ ಕಾಂತರಾಜು, ಸತೀಶ್, ವಿಜಯ, ಚಂದ್ರಶೇಖರ್, ಸಿದ್ದಪ್ಪ, ರವಿಕುಮಾರ್ ಹಾಗೂ ಪವಿ ಉಪಸ್ಥಿತರಿದ್ದರು.