ಪೆÇನ್ನಂಪೇಟೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಆಚರಿಸುತ್ತಿರುವ ಸೇವಾ ಸಪ್ತಾಹ ಅಂಗವಾಗಿ ಶ್ರೀಮಂಗಲ ಶಕ್ತಿಕೇಂದ್ರದ ಅಧ್ಯಕ್ಷ ಬಾಚಂಗಡ ದಾದಾ ದೇವಯ್ಯ ಅಧ್ಯಕ್ಷತೆಯಲ್ಲಿ ಶ್ರೀಮಂಗಲ ವಾಜಪೇಯಿ ಕ್ರೀಡಾಂಗಣದಲ್ಲಿ ಗಿಡ ನೆಡುವ ಹಾಗೂ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಶ್ರೀಮಂಗಲ ಬೂತ್ ಅಧ್ಯಕ್ಷರಾದ ಚೋನಿರ ಕಾಳಯ್ಯ, ತಾಲೂಕು ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಚೋಕಿರ ಕಲ್ಪನಾ ತಿಮ್ಮಯ್ಯ, ಸದಸ್ಯರುಗಳಾದ ಅಯ್ಯಮಾಡ ಡಾಟಿ ಗಂಗಮ್ಮ, ಮಾಚಿರ ವಾಣಿ ಸೇರಿದಂತೆ ಹೆಚ್ಚಿನ ಕಾರ್ಯಕರ್ತರು ಪಾಲ್ಗೊಂಡಿದ್ದರು.ಚೆಟ್ಪಳ್ಳಿ: ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಚೆಟ್ಟಳ್ಳಿ ಬಿಜೆಪಿ ಸಮಿತಿ ವತಿಯಿಂದ ದೇವಸ್ಥಾನದ ಆವರಣದಲ್ಲಿ ಪಾರಿಜಾತ ಗಿಡ ನೆಟ್ಟು ಮೋದಿ ಅವರ ಶ್ರೇಯಸ್ಸಿಗೆ ದೇವರಲ್ಲಿ ಪ್ರಾರ್ಥಿಸಲಾಯಿತು. ಈರಳೆವಳಮುಡಿ ಭಗವತಿ, ಚೇರಳ ಭಗವತಿ, ಶ್ರೀಮಂಗಲ ಭಗವತಿ ಹಾಗೂ ಕೂಡ್ಲೂರು ಚೆಟ್ಟಳ್ಳಿ ವಿನಾಯಕ ದೇವಾಲಯದ ಆವರಣದಲ್ಲಿ ಗಿಡ ನೆಡಲಾಯಿತು. ಬಿಜೆಪಿ ತಾಲೂಕು ಕಾರ್ಯದರ್ಶಿ ಮೇರಿ ಅಂಬುದಾಸ್, ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ, ಶಕ್ತಿ ಕೇಂದ್ರ ಪ್ರಮುಖ್ ಕಂಠಿ ಕಾರ್ಯಪ್ಪ ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಶಕ್ತಿ ಕೇಂದ್ರ ಸಹ ಪ್ರಮುಖ್ ರವಿ, ಕೃಷಿ ಮೋರ್ಚಾ ಅಧ್ಯಕ್ಷ ಯದು ಕುಮಾರ್, ಕಾರ್ಯಕರ್ತರು ಭಾಗವಹಿಸಿದ್ದರು.ಕದನೂರು : ಪ್ರಧಾನಿ ಮೋದಿ ಜನ್ಮ ದಿನಾಚರಣೆ ಅಂಗವಾಗಿ ಕದನೂರು ಬಿಜೆಪಿ ಶಕ್ತಿಕೇಂದ್ರ ವತಿಯಿಂದ ಭಗವತಿ ದೇವಸ್ಥಾನ ಆವರಣದಲ್ಲಿ ಗಿಡ ನೆಡಲಾಯಿತು. ಶಕ್ತಿಕೇಂದ್ರ ಅಧ್ಯಕ್ಷ ಪೊಯ್ಯೇಟೀರ ಮಿಟ್ಟು, ಕಾರ್ಯದರ್ಶಿ ಕಾಣತಂಡ ರಾಯ್, ಕಾರ್ಯಕರ್ತರಾದ ವಿನೋದ್, ಧನು, ಶರಿ ಇದ್ದರು.ಗೋಣಿಕೊಪ್ಪ ವರದಿ: ಪ್ರಧಾನಿ ನರೇಂದ್ರ ಮೋದಿ ಜನ್ಮ ದಿನಾಚರಣೆ ಅಂಗವಾಗಿ ವೀರಾಜಪೇಟೆ ತಾಲೂಕು ಬಿಜೆಪಿ ಒಬಿಸಿ ಮೋರ್ಚಾದ ವತಿಯಿಂದ ಇಲ್ಲಿನ ಸರ್ಕಾರಿ ಪ್ರಾಥಮಿಕ ಕನ್ನಡ ಮಾಧ್ಯಮ ಶಾಲೆ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಒಬಿಸಿ ಮೋರ್ಚಾದ ಉಪಾಧ್ಯಕ್ಷ ಸುಬ್ರಮಣಿ, ಪ್ರಮುಖರಾದ ರಾಜೇಶ್, ಮುಖ್ಯ ಶಿಕ್ಷಕಿ ಶಶಿಕಲಾ ಇದ್ದರು.ಸಂಪಾಜೆ: ಪ್ರಧಾನಿ ನರೇಂದ್ರ ಮೋದಿಯವರ 70ನೇ ವರುಷದ ಹುಟ್ಟು ಹಬ್ಬದ ಪ್ರಯುಕ್ತ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ಸಂಪಾಜೆ ಭಾರತೀಯ ಜನತಾ ಪಾರ್ಟಿ ವತಿಯಿಂದ ನಡೆಯಿತು.

ಕೊಡಗು-ಸಂಪಾಜೆ ಗ್ರಾಮದ ಕೊಯನಾಡು ಶಾಲಾ ಬಳಿಯಿಂದ ಸಂಪಾಜೆ ಗೇಟಿನ ತನಕ ಸ್ವಚ್ಛತಾ ಅಭಿಯಾನ ಕಾರ್ಯಕ್ರಮವು ನಿರಂತರ ಸುರಿಯುವ ಮಳೆಯ ನಡುವೆ ನಡೆಯಿತು.

ಸಂಪಾಜೆ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿಗಳು, ಬಿ.ಜೆ.ಪಿ. ಶಕ್ತಿ ಕೇಂದ್ರದ ಸದಸ್ಯರುಗಳು, ಸಂಘ-ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು, ಗ್ರಾಮ ಪಂಚಾಯಿತಿ ಸಂಭಾವಿತ ಅಭ್ಯರ್ಥಿಗಳು, ಪಕ್ಷದ ಹಿರಿಯರು, ಮಹಿಳಾ ಮೋರ್ಚಾ ಪ್ರತಿನಿಧಿಗಳು, ಯುವ ಮೋರ್ಚಾ ಸದಸ್ಯರುಗಳು, ಬೂತ್ ಸಮಿತಿ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಸದಸ್ಯರು, ಬಿಜೆಪಿ ಕಾರ್ಯಕರ್ತರು ಭಾಗವಹಿಸಿದ್ದರು.ಗೋಣಿಕೊಪ್ಪ ವರದಿ: ಮೋದಿ ಹುಟ್ಟುಹಬ್ಬ ಪ್ರಯುಕ್ತ ಇಲ್ಲಿನ ವೆಂಕಟಪ್ಪ ಬಡಾವಣೆ ನಿವಾಸಿಗಳು ಗಿಡ ನೆಟ್ಟರು. ಗಿಡ ರಕ್ಷಣೆಗೆ ತಂತಿಯ ಕವಚ ಹಾಕಿ ಸಂರಕ್ಷಿಸಿದರು. ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯೆ ನೂರೇರ ರತಿ ಅಚ್ಚಪ್ಪ, ಸ್ಥಳೀಯರಾದ ಕಲ್ಯಾಟಂಡ ಶ್ಯಾಂ ಇದ್ದರು.