ವೀರಾಜಪೇಟೆ, ಸೆ. 22: ವೀರಾಜಪೇಟೆ ಬ್ಲಾಕ್ ಮಹಿಳಾ ಕಾಂಗ್ರೆಸ್ ವತಿಯಿಂದ ಇಲ್ಲಿನ ದೊಡ್ಡಟ್ಟಿ ಚೌಕಿಯಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಮಹಿಳಾ ಕಾಂಗ್ರೆಸ್ ಸಂಸ್ಥಾಪಕರ ದಿನ ಆಚರಿಸಲಾಯಿತು.
ಕಚೇರಿಯ ಸಭಾಂಗಣದಲ್ಲಿ ಧ್ವಜಾರೋಹಣವನ್ನು ಬ್ಲಾಕ್ ಅಧ್ಯಕ್ಷ ತೋರೆರ ಪೊನ್ನಕ್ಕಿ ನೆರವೇರಿಸಿದರು. ನಂತರ ಇಂದಿನ ಸಮಾಜದಲ್ಲಿ ಮಹಿಳಾ ಸಬಲೀಕರಣ, ಅವರ ಸ್ವಾವಲಂಬಿ ಬದುಕು, ಇಂದಿನ ಸಮಾಜದಲ್ಲಿ ಮಹಿಳೆಯರ ಸ್ಥಾನಮಾನ, ಸಮಾಜ ಸೇವೆ ಕುರಿತು ಶೀಬಾ ಪೃಥ್ವಿನಾಥ್, ಪ್ರಿಯದರ್ಶಿನಿ ಮಹಿಳಾ ಘಟಕದ ಸಿಂಧೂ ಮಾತನಾಡಿದರು.
ಮಹಿಳಾ ಘಟಕದ ನಗರ ಸಮಿತಿ ಅಧ್ಯಕ್ಷೆ ದಿವ್ಯಾ, ಪ್ರಮುಖ ಕಾರ್ಯಕರ್ತೆಯರಾದ ಪ್ರೇಮ, ಸುಮಾ, ರೋಶಿ ಮತ್ತಿತರರು ಭಾಗವಹಿಸಿದ್ದರು. ಅತಿಥಿಗಳಾಗಿ ನಗರ ಸಮಿತಿ ಅಧ್ಯಕ್ಷ ಜಿ.ಜಿ.ಮೋಹನ್, ಕಾರ್ಯದರ್ಶಿ ಎಂ.ಎಂ.ಶಶಿಧರನ್ ಹಾಜರಿದ್ದರು. ರಾಷ್ಟ್ರೀಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸುಶ್ಮಿತಾದೇವ್ ಅವರ ನಿರ್ದೇಶನದ ಮೇರೆ ಮಹಿಳಾ ಸಂಸ್ಥಾಪಕರ ದಿನಾಚರಣೆ ಆಚರಿಸಲಾಯಿತೆಂದೂ ಅಧ್ಯಕ್ಷತೆ ವಹಿಸಿದ್ದ ಪೊನ್ನಕ್ಕಿ ತಿಳಿಸಿದರು.