ಮಡಿಕೇರಿ, ಸೆ.22: ಕಾನೂರು ಗ್ರಾಮ ಪಂಚಾಯಿತಿಯ 2019-20ನೇ ಸಾಲಿನ ಜಮಾಬಂದಿ ಸಭೆಯನ್ನು ತಾ. 24ರಂದು ಪೂರ್ವಾಹ್ನ 11 ಗಂಟೆಗೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಸಲಾಗುತ್ತದೆ. ಜಮಾಬಂದಿ ನೋಡಲ್ ಅಧಿಕಾರಿ ಕೆ.ಸಿ. ಅಪ್ಪಣ್ಣ, ಸಹಾಯಕ ನಿರ್ದೇಶಕರು (ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ವೀರಾಜಪೇಟೆ) ತಾಲೂಕು ಪಂಚಾಯಿತಿ ಅವರ ಸಮ್ಮುಖದಲ್ಲಿ ಸಭೆ ನಡೆಯಲಿದೆ.