ಚೆಟ್ಟಳ್ಳಿ, ಸೆ. 22: ಕರ್ನಾಟಕ ರಾಜ್ಯ ಸುನ್ನೀ ಸ್ಟೂಡೆಂಟ್ ಫೆಡರೇಷನ್ ಸಮಿತಿಯ ವತಿಯಿಂದ ನಲ್ವತ್ತೇಕರೆ ಶಾಖೆಯಲ್ಲಿ ಏಕದಿನ ಯೂನಿಟ್ ನಾಯಕರಿಗೆ ತರಬೇತಿಯನ್ನು (ಮಫಾಜ್) ಸುಳ್ಯಾ ಎಸ್.ಎಸ್.ಎಫ್. ಸೆಕ್ಟರ್ ಅಧ್ಯಕ್ಷ ಸ್ವಬಾಹ್ ಸಖಾಫಿ ನೀಡಿದರು. ತರಬೇತಿ ಕಾರ್ಯಕ್ರಮದಲ್ಲಿ ಸೋಮವಾರಪೇಟೆ ತಾಲೂಕು ಮುಸ್ಲಿಂ ಜಮಾಅತ್‍ನ ಸದಸ್ಯರಾಗಿ ನಲ್ವತ್ತೇಕರೆಯಿಂದ ಆಯ್ಕೆಯಾದ ಎಸ್.ಎಸ್.ಎಫ್. ಸಕ್ರಿಯ ಕಾರ್ಯಕರ್ತ ಅಬ್ದುಲ್ ಸಲಾಂ ಅವರನ್ನು ಎಸ್.ವೈ.ಎಸ್., ಎಸ್.ಎಸ್.ಎಫ್. ನಾಯಕರು ಸನ್ಮಾನಿಸಿದರು.

ಈ ಸಂದರ್ಭ ಎಸ್.ವೈ.ಎಸ್. ಸಿದ್ದಾಪುರ ಸೆಂಟ್ರಲ್ ಸಮಿತಿ ಅಧ್ಯಕ್ಷ ಶಿಹಾಬ್ ಲತೀಫಿ, ಎಸ್.ಎಸ್.ಎಸ್.ಎಫ್. ಸೆಕ್ಟರ್ ಅಧ್ಯಕ್ಷ ರಜಾಖ್ ಸಹದಿ, ಡಿವಿಷನ್ ಅಧ್ಯಕ್ಷ ಯೂಸುಫ್ ಝೈನಿ, ಶಾಖಾ ಕಾರ್ಯದರ್ಶಿ ಅಬ್ದುರಹೀಮ್, ಎಸ್.ವೈ.ಎಸ್. ಹಾಗೂ ಎಸ್.ಎಸ್.ಎಫ್. ಶಾಖೆಯ ನಾಯಕರು ಪಾಲ್ಗೊಂಡಿದ್ದರು.