*ಸಿದ್ದಾಪುರ, ಸೆ. 21: ವಾಲ್ನೂರು-ತ್ಯಾಗತ್ತೂರು ಬಿಜೆಪಿ ಶಕ್ತಿ ಕೇಂದ್ರದ ಸಭೆ ಸ್ಥಳೀಯ ಕೃಷಿ ಪತ್ತಿನ ಸಹಕಾರ ಸಂಘದ ಸಭಾಂಗಣದಲ್ಲಿ ನಡೆಯಿತು.
ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಎಂ.ಬಿ.ಸುರೇಶ್ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶಕ್ತಿ ಕೇಂದ್ರದ ಪ್ರಮುಖರನ್ನು ಆಯ್ಕೆ ಮಾಡಲಾಯಿತು.
ಪ್ರಮುಖ್ರಾಗಿ ಡಿ.ಎಲ್. ಮನುಮಹೇಶ್, ಸಹ ಪ್ರಮುಖ್ ಅಭ್ಯತ್ಮಂಗಲ ಜ್ಯೋತಿ ನಗರದ ಕೋಟೆಮನೆ ರಾಜೇಶ್, ಮಹಿಳಾ ಘಟಕದ ಪ್ರಮುಖ್ ಮುಂಡ್ರಮನೆ ಕವಿತಾ ಜಯಂತ್, ಸಹ ಪ್ರಮುಖ್ ರಾಗಿ ಕವಿತಾ ದೇವಿಲಾಲ್, ಯುವ ಮೋರ್ಚಾದ ಪ್ರಮುಖ್ ಚಂದಪಂಡ ಮದನ್ ಕಾರ್ಯಪ್ಪ, ಕೃಷಿ ಮೋರ್ಚಾದ ಪ್ರಮುಖ್ ಪ್ರದೀಪ್, ಹಿಂದುಳಿದ ವರ್ಗದ ಪ್ರಮುಖ್ ದಿನೇಶ್, ಸಹ ಪ್ರಮುಖ್ ಆಗಿ ಅಭ್ಯತ್ಮಂಗಲದ ಸುನೀಲ್, ಪರಿಶಿಷ್ಟ ಜಾತಿ ವರ್ಗದ ಪ್ರಮುಖ್ ಜನಾರ್ಧನ, ನಂಜರಾಯಪಟ್ಟಣದ ಪ್ರಮುಖ್ ಕೂಟುಮಾಡ ನವೀನ್ ಹಾಗೂ ಸಹ ಪ್ರಮುಖ್ ಆಗಿ ಮಂಜುನಾಥ್ ಆಯ್ಕೆಯಾಗಿದ್ದಾರೆ.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಪಕ್ಷದ ಪ್ರಮುಖರಾದ ಅಂಚೆಮನೆ ಸುಧಿ, ಸ್ಥಾನೀಯ ಸಮಿತಿ ಮಾಜಿ ಅಧ್ಯಕ್ಷ ಕುಮಾರಪ್ಪ, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ಮಡಿಕೇರಿ ಕ್ಷೇತ್ರದ ಅಧ್ಯಕ್ಷ ಮನು ರೈ, ಪ್ರಧಾನ ಕಾರ್ಯದರ್ಶಿ ಉರುಳುಕೊಪ್ಪ ಮಾದಪ್ಪ, ಜಿ. ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಎಪಿಎಂಸಿ ಸದಸ್ಯ ಜೆತ್ತು ವಿಜಯ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.