ವೀರಾಜಪೇಟೆ, ಸೆ. 21: ರಾಷ್ಟ್ರದ, ರಾಜ್ಯದ, ಅಭಿವೃದ್ಧಿಗೆ ಸೇವೆ ಸಲ್ಲಿಸಿದ ಗಣ್ಯ ವ್ಯಕ್ತಿಗಳ ಪೈಕಿ ತಾಂತ್ರಿಕ ತಜ್ಞ ಸರ್ ಎಂ. ವಿಶ್ವೇಶ್ವರಯ್ಯ ಅವರು ಒಬ್ಬರಾಗಿದ್ದು ಅವರ ಜನ್ಮ ದಿನಾಚರಣೆಯನ್ನು ಆಚರಿಸುವ ಹಿಂದೆ ಒಂದು ಉತ್ತಮ ಉದ್ದೇಶವಿದ್ದು ಅವರು ಸಲ್ಲಿಸಿರುವ ಸೇವೆ ಅವರ ಸಾರ್ಥಕ ಬದುಕನ್ನು ಇಂದು ಸ್ಮರಿಸಬೇಕಾಗಿದೆ ಎಂದು ಇಲ್ಲಿನ ಪಟ್ಟಣ ಪಟ್ಟಣ ಪಂಚಾಯಿತಿ ಅಭಿಯಂತರ ಎಂ.ಪಿ. ಹೇಮಕುಮಾರ್ ಹೇಳಿದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಇಂಜಿನಿಯರ್ ವಿಭಾಗದ ವತಿಯಿಂದ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ 160ನೇ ಜನ್ಮ ದಿನಾಚರಣೆಯ ಅಂಗವಾಗಿ ಆಯೋಜಿಸಿದ್ದ ಸಭೆಯನ್ನುದ್ದೇಶಿಸಿ ಮಾತನಾಡಿದ ಹೇಮ್‍ಕುಮಾರ್, ಕರ್ನಾಟಕಕ್ಕೆ ರಾಜರ ಕಾಲದಿಂದಲೂ ವಿವಿಧ ಯೋಜನೆಗಳ ಮೂಲಕ ಅನೇಕ ಜನಪರ ಅಭಿವೃದ್ಧಿ ಮೂಲಕ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಆಗಿನ ಜನರ ಬೇಕು ಬೇಡಿಕೆಗಳಿಗೆ ಮುಕ್ತವಾಗಿ ಸ್ಪಂದಿಸಿ ವಿಶೇಷವಾಗಿ ಸಮಾಜಕ್ಕೆ ಸೇವೆ ಸಲ್ಲಿಸಿದ್ದರು. ಆಗಿನ ಕಾಲದಲ್ಲಿಯೇ ಶಿಕ್ಷಣದಿಂದ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬದನ್ನು ಅವರು ಸಾಧಿಸಿ ತೋರಿಸಿದ್ದಾರೆ. ಮಕ್ಕಳಿಗೆ ವಿದ್ಯಾಭ್ಯಾಸ ಮಾತ್ರ ನೀಡಿದರೆ ಸಾಲದು ಇಂತಹ ಗಣ್ಯ ವ್ಯಕ್ತಿಯ ಜನ್ಮ ದಿನಾಚರಣೆಯ ಮಹತ್ವವನ್ನು ಎಲ್ಲರಿಗೂ ಸಾರಿ ಹೇಳಬೇಕಾಗಿದೆ ಎಂದರು.
ವೀರಾಜಪೇಟೆ ಪಟ್ಟಣ ಪಂಚಾಯಿತಿ ಸದಸ್ಯ ಡಿ.ಪಿ. ರಾಜೇಶ್. ಎಸ್.ಎಚ್.ಮತೀನ್, ಸೆಸ್ಕಾಂ ಸಹಾಯಕ ಇಂಜಿನಿಯರ್ ಸುರೇಶ್ ಮಾತನಾಡಿದರು.
ವೇದಿಕೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಶ್ರೀಧರ್, ಲೋಕೋಪಯೋಗಿ ಸಹಾಯಕ ಇಂಜಿನಿಯರ್ ಯತೀಶ್, ಪಟ್ಟಣ ಪಂಚಾಯಿತಿ ಸದಸ್ಯರುಗಳು ಉಪಸ್ಥಿತರಿದ್ದರು. ಸಮಾರಂಭವನ್ನು ಯೋಜನಾಧಿಕಾರಿ ಶೈಲಾ ನಿರೂಪಿಸಿದರು.