ಸೋಮವಾರಪೇಟೆ, ಸೆ.20: ಇಲ್ಲಿನ ಸಿ.ಕೆ. ಸುಬ್ಬಯ್ಯ ರಸ್ತೆಯ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು, ಇದರಿಂದಾಗಿ ವಾಹನ ಸವಾರರು ಪ್ರತಿನಿತ್ಯ ಸರ್ಕಸ್ ಮಾಡುವಂತಾಗಿದೆ.

ಪಟ್ಟಣಕ್ಕೆ ಆಗಮಿಸುವ ಮತ್ತು ಪಟ್ಟಣದಿಂದ ನಿರ್ಗಮಿಸುವ ವಾಹನಗಳು, ಸಾರ್ವಜನಿಕರು ಈ ರಸ್ತೆಯನ್ನು ಹೆಚ್ಚಾಗಿ ಅವಲಂಭಿಸಿದ್ದು, ರಸ್ತೆಯ ಮಧ್ಯೆ ಇರುವ ಗುಂಡಿಯಿಂದಾಗಿ ನಿತ್ಯವೂ ಸಣ್ಣಪುಟ್ಟ ಅವಘಡಗಳು ನಡೆಯುತ್ತಿವೆ.

ಈ ರಸ್ತೆಯ ಒಂದು ಬದಿಯಲ್ಲಿ ವಾಹನಗಳು ನಿಲುಗಡೆಯಾಗುತ್ತಿವೆ. ರಸ್ತೆ ಮಧ್ಯೆ ಇರುವ ಗುಂಡಿಯನ್ನು ತಪ್ಪಿಸುವ ಭರದಲ್ಲಿ ವಾಹನಗಳು; ಪಾದಚಾರಿಗಳಿಗೂ ತೊಂದರೆ ಯಾಗಿದೆ. ಕನಿಷ್ಟ ಕಾಂಕ್ರೀಟ್ ಹಾಕಿ ಈ ಗುಂಡಿಯನ್ನು ಮುಚ್ಚಲು ಪಟ್ಟಣ ಪಂಚಾಯಿತಿಗೆ ಸಾಧ್ಯವಾಗುತ್ತಿಲ್ಲವೇ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.