ಕರಿಕೆ, ಸೆ. 20: ವಿಶ್ವ ಬಿದಿರು ದಿನಾಚರಣೆಯನ್ನು ಸಂಪಾಜೆ ಉಪ ವಲಯದ ವ್ಯಾಪ್ತಿಯಲ್ಲಿ ಬಿದಿರು ನೆಡುವುದರ ಮೂಲಕ ಆಚರಿಸಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ನೀಲೇಶ್ ಶಿಂದೆ ಹಾಗೂ ವಲಯ ಅರಣ್ಯಾಧಿಕಾರಿ ಮಧುಸೂದನ್ ಹಾಗೂ ಸಿಬ್ಬಂದಿ 35 ಜಾತಿಯ ಬಿದಿರು ಗಿಡಗಳನ್ನು ನೆಡುವ ಮೂಲಕ ವಿಶ್ವ ಬಿದಿರು ದಿನಾಚರಣೆಯನ್ನು ಆಚರಿಸಿದರು.