ಚೆಟ್ಟಳ್ಳಿ, ಸೆ. 20: ನಾಪೆÇೀಕ್ಲು ರಾಫೆಲ್ಸ್ ಇಂಟರ್ ನ್ಯಾಷನಲ್ ಇಂಗಿಷ್ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರಿಗೆ ಸನ್ಮಾನ ಕಾರ್ಯಕ್ರಮ ಕಾಲೇಜು ಸಭಾಂಗಣದಲ್ಲಿ ನಡೆಯಿತು.

ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಮತ್ತು ಉಪನ್ಯಾಸಕರನ್ನು ಮುಖ್ಯ ಅತಿಥಿಗಳಾದ ನ್ಯಾಯಾಧೀಶೆ ನೂರುನ್ನೀಸಾ, ಡಾಕ್ಟರ್ ರೋಹನ್ ಪೂವಯ್ಯ, ನಾಪೆÇೀಕ್ಲು ಠಾಣಾಧಿಕಾರಿ ಕಿರಣ್ ಸನ್ಮಾನಿಸಿದರು.

ಹಿಂದಿನ ಕಾಲದಲ್ಲಿ ವಿದ್ಯಾಭ್ಯಾಸಕ್ಕೆ ಅಷ್ಟೊಂದು ಪ್ರಾಮುಖ್ಯತೆ ಕೊಡುತ್ತಿರಲಿಲ್ಲ. ಈಗ ಕಾಲ ಬದಲಾಗಿದೆ. ಜೊತೆಗೆ ಚಿಂತನೆಯು ಬದಲಾಗಿದೆ ಹಿಂದಿನ ಕಾಲಕ್ಕೆ ಹೋಲಿಕೆ ಮಾಡಿದರೆ ಈಗ ವಿದ್ಯಾರ್ಥಿಗಳಿಗೆ ಉತ್ತಮ ಸೌಲಭ್ಯವಿದೆ ಎಂದರು. ಮತ್ತೊಬ್ಬ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮೂಳೆತಜ್ಞ ಡಾ. ರೋಹನ್ ಪೂವಯ್ಯ ಮಾತನಾಡಿ, ಅಸಾಧ್ಯ ಎಂಬದು ಯಾವುದೂ ಇಲ್ಲ. ಕಠಿಣ ಪರಿಶ್ರಮ ಪಟ್ಟರೆ ಎಲ್ಲವನ್ನೂ ಸಾಧಿಸಬಹುದು. ಪ್ರಯತ್ನದಿಂದ ಮಾತ್ರ ಏನಾದರೂ ಸಾಧಿಸಲು ಸಾಧ್ಯ ಎಂದರು.

ಮುಖ್ಯ ಅತಿಥಿಯಾಗಿ ಆಗಮಿಸಿದ ನಾಪೆÇೀಕ್ಲು ಠಾಣಾಧಿಕಾರಿ ಕಿರಣ್ ಆರ್ ಮಾತನಾಡಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಅಧ್ಯಕ್ಷ ಸ್ಥಾನವನ್ನು ಶಿಕ್ಷಕ ಮಹಬೂಬ್ ವಹಿಸಿದ್ದರು.

ಸಭಾಕಾರ್ಯಕ್ರಮ ನಂತರ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಕಾಲೇಜಿನ ಉಪ ಪ್ರಾಂಶುಪಾಲರಾದ ತನ್ವೀರ್, ಕಾಲೇಜಿನ ಉಪಾಧ್ಯಕ್ಷರಾದ ಹಂಸ ಹಾಜಿ, ಕಾರ್ಯದರ್ಶಿ ಹಸೀನಾ ಅಬ್ದುಲ್ಲಾ, ಮನ್ಸೂರ್ ಅಲಿ, ವಿದ್ಯಾರ್ಥಿಗಳ ಪೆÇೀಷಕರು ಮತ್ತಿತರರು ಇದ್ದರು.

ಅದಿತಿ ಎಂ.ಪಿ. ಸ್ವಾಗತಿಸಿ ಮಹಮ್ಮದ್ ಹುಸೇನ್, ಅಕ್ಷತಾ ಪೂವಪ್ಪ ನಿರೂಪಿಸಿ, ರೇಖಾ ವಂದಿಸಿದರು.