*ಕೊಡ್ಲಿಪೇಟೆ, ಸೆ. 20: ಭೂಮಿ, ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯಿಂದ ರಾಜ್ಯಾದ್ಯಂತ ಹಮ್ಮಿಕೊಂಡಿರುವ ಜನ ಜಾಗೃತಿ ಜಾಥಾ, ಕೊಡ್ಲಿಪೇಟೆಗೆ ಆಗಮಿಸಿದ ಸಂದರ್ಭ ಬಸ್ ನಿಲ್ದಾಣದಲ್ಲಿ ಸಭೆ ಜರುಗಿತು.
ಸುಗ್ರೀವಾಜ್ಞೆಗಳ ಮೂಲಕ ಜನ ವಿರೋಧಿ ಭೂಮಿ ಮತ್ತು ಕಾರ್ಮಿಕ ಕಾಯ್ದೆಯನ್ನು ಸರ್ಕಾರ ಜಾರಿ ಮಾಡುತ್ತಿರುವದು ಖಂಡನೀಯ ಎಂದು ಸಮಿತಿಯ ಸಂಚಾಲಕ ಶ್ರೀನಿವಾಸ್ ಕಂದಗಾಲ ಆರೋಪಿಸಿದರಲ್ಲದೇ, ‘ಉಳುವವನೆ ಭೂ ಒಡೆಯ’ ಎಂದು ಘೋಷಿಸಿದ ಬಡವರ ಭೂ ಸುಧಾರಣೆಯ ಹರಿಕಾರ ಮಾಜಿ ಮುಖ್ಯಮಂತ್ರಿ ದೇವರಾಜು ಅರಸು ಅವರ ಸಮಾಧಿ ಸ್ಥಳದಿಂದ ಆರಂಭಗೊಂಡಿರುವ ಜಾಗೃತಿ ಜಾಥಾ, ರಾಜ್ಯಾದ್ಯಂತ ಮೂರು ತಂಡಗಳಾಗಿ ಸಂಚರಿಸುತ್ತಾ ಜಾಗೃತಿ ಮೂಡಿಸುತ್ತಿದೆ ಎಂದರು.
ಈ ಸಂದರ್ಭ ಸಮಿತಿಯ ಸದಸ್ಯರುಗಳಾದ ಡಿ.ಎಸ್. ನಿರ್ವಾಣಪ್ಪ, ಕುಮಾರ ಸಮತಾಳ, ದಲಿತ ಹಿತ ರಕ್ಷಣಾ ಒಕ್ಕೂಟದ ತಾಲೂಕು ಅಧ್ಯಕ್ಷ ವಸಂತ್, ಸದಸ್ಯ ವೇದ್ಕುಮಾರ್, ಜಗದೀಶ್ , ಕೆಂಚೇಶ್ವರ, ವಿಜಯ, ಧರ್ಮ ಕಲ್ಲಳ್ಳಿ , ಅಭಿ, ಕೇಶವ, ಶೌಕತ್ ಸೇರಿದಂತೆ ಇತರರು ಉಪಸ್ಥಿತರಿದ್ದರು.