ನಾಪೋಕ್ಲು, ಸೆ. 19: ಇತ್ತೀಚೆಗೆ ಸುರಿದ ಭಾರೀ ಗಾಳಿ ಮಳೆಗೆ ತಮ್ಮ ವಾಸದ ಮನೆಯನ್ನು ಕಳೆದುಕೊಂಡು ಕಿರುಂದಾಡು ಗ್ರಾಮದ ಸರ್ಕಾರಿ ಶಾಲೆಯಲ್ಲಿ ವಾಸಿಸುತ್ತಿರುವ ಪೇರಿಯಂಡ ಮೋಹನ್ ಕುಟುಂಬಕ್ಕೆ ಸಹಾಯಧನ ನೀಡಲಾಯಿತು. ಮನೆ ನಿರ್ಮಾಣಕ್ಕಾಗಿ ಪುಲಿಯಂಡ ಸೊಮಯ್ಯ ಅಶೋಕ್ (PSಂ) ಚಾರಿಟಿ ವತಿಯಿಂದ 50 ಸಾವಿರ ರೂ. ಚೆಕ್ಕನ್ನು ವಿತರಿಸಲಾಯಿತು. ಚಾರಿಟಿ ನಿರ್ದೇಶಕ ಕೇಟೋಳಿರ ಹರೀಶ್ಪೂವಯ್ಯ, ಪೇರಿಯಂಡ ಮೋಹನ್ ಅವರಿಗೆ ಚೆಕ್ಕನ್ನು ಹಸ್ತಾಂತರಿಸಿದರು. ಈ ಸಂದರ್ಭ ಅಂಬಿಕಾರ್ಯಪ್ಪ, ಕಿರಣ್, ಸುಭಾಷ್ ಮತ್ತು ಅನೂಪ್ ಇದ್ದರು.