ಮಡಿಕೇರಿ, ಸೆ.19 : ಕಳೆದ ಮೂರು ವರ್ಷಗಳ ಅತಿವೃಷ್ಟಿಯಿಂದ ಜಿಲ್ಲೆಯ ಬೆಳೆÉಗಾರರು ಅಪಾರ ನಷ್ಟವನ್ನು ಅನುಭವಿಸಿದ್ದು, ಪ್ರಸ್ತುತ ಆರ್ಥಿಕ ಸಂಕಷ್ಟ ಎದುರಾಗಿರುವುದ ರಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರ ತಕ್ಷಣ ನೆರವಿಗೆ ಬರಬೇಕೆಂದು ಕೊಡಗು ಬೆಳೆಗಾರರ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ.ಸುದ್ದಿಗೋಷ್ಠಿಯಲ್ಲಿ ಕೊಡಗು ಬೆಳೆಗಾರರ ಒಕ್ಕೂಟದ ಅಧ್ಯಕ್ಷ ಹರೀಶ್ ಅಪ್ಪಯ್ಯ ಮಾತನಾಡಿ, ಜಿಲ್ಲೆಯ ಕಾಫಿ ಬೆಳೆಗಾರರು ಹವಾಗುಣ ವೈಪರೀತ್ಯದ ಅನಾಹುತಗಳಿಂದ ನಷ್ಟವನ್ನು ಅನುಭವಿಸುತ್ತಿದ್ದು, ಈ ಬಗ್ಗೆ ಪ್ರಧಾನ ಮಂತ್ರಿಗಳು, ಹಣಕಾಸು ಮತ್ತು ವಾಣಿಜ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಗಮನ ಸೆಳೆಯಲಾಗಿದೆ ಎಂದರು.ಪ್ರಮುಖವಾಗಿ 10 ಹೆಕ್ಟೇರ್ ಒಳಗಿನ ಬೆಳೆಗಾರರ ಸಾಲಮನ್ನಾ, 10 ಹೆಕ್ಟೇರ್ ಮೇಲ್ಪಟ್ಟ ಬೆಳೆಗಾರರ ಸಾಲದ ಮೇಲಿನ ಬಡ್ಡಿ ಮನ್ನಾ, ಶೇ.3 ರ ಬಡ್ಡಿ ದರದಲ್ಲಿ ಸಾಲ ವಿತರಣೆ ಹಾಗೂ ಇರುವ ಸಾಲದ ಮರುಪಾವತಿಗೆ 10 ವರ್ಷಗಳ ಕಾಲಾವಕಾಶ ಒದಗಿಸು ವಂತೆ ಮನವಿ ಮಾಡಲಾಗಿದೆ. ಇದರೊಂದಿಗೆ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಅವರ ಮೂಲಕ ಕೇಂದ್ರದ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರೊಂದಿಗೆ ನಡೆಸಿದ ವೆಬಿನಾರ್ ನಲ್ಲೂ ಬೆಳೆಗಾರರ ಸಮಸ್ಯೆಗಳನ್ನು ವಿವರಿಸಲಾಗಿದೆ. ಬೆಳೆÉಗಾರರು ವರ್ಷದಲ್ಲಿ ಕೇವಲ ಕಾಫಿ ಹೂವಿನ ಸಂದರ್ಭ ಎರಡು ತಿಂಗಳ ಕಾಲ ಬಳಸುವ 10 ಹೆಚ್‍ಪಿ ಮೋಟಾರ್‍ಗೆ ಶುಲ್ಕ ವಿನಾಯಿತಿ ನೀಡುವಂತೆ ಒತ್ತಾಯಿಸಿದ್ದು, ಇದಕ್ಕೆ ರಾಜ್ಯ ಸರ್ಕಾರ ಸಕಾರಾತ್ಮಕವಾಗಿ (ಮೊದಲ ಪುಟದಿಂದ) ಸ್ಪಂದಿಸಿರುವುದಾಗಿ ಮಾಹಿತಿ ನೀಡಿದರು. ಬೆಳೆÉಗಾರರ ಸಂಘಟನೆಗಳ ಒಕ್ಕೂಟದ ಸಂಚಾಲಕ ಕಾರ್ಯಪ್ಪ ಎಂ.ಸಿ. ಅವರು ಮಾತನಾಡಿ, ಕೇಂದ್ರದ ಹಣಕಾಸು ಸಚಿವರೊಂದಿಗಿನ ವೆಬಿನಾರ್‍ನಲ್ಲಿ ಕಾಫಿ ರಫ್ತಿಗೆ ಸಂಬಂಧ ಪಟ್ಟಂತೆ ನೀಡಲಾಗುತ್ತಿದ್ದ ಶೇ.5 ಇನ್‍ಸೆಂಟಿವ್‍ನ್ನು ಶೇ.3 ಕ್ಕೆ ಇಳಿಸಲಾಗಿದೆ. ಇದನ್ನು ಮರಳಿ ಹಿಂದಿನಂತೆ ಶೇ.5 ರಂತೆ ನೀಡಬೇಕೆಂದು ಹಣಕಾಸು ಸಚಿವರಲ್ಲಿ ಮನವಿ ಮಾಡಲಾಗಿದೆ ಎಂದರು. ಡಿ ಹಸ್ಕ್ ಮಾಡಿದ ಕಾಫಿಯ ಮೇಲಿನ ಶೇ.25 ತೆರಿಗೆಯನ್ನು ತೆಗೆದು ಹಾಕಿದಲ್ಲಿ ಬೆಳೆಗಾರರಿಗೆ ಅನುಕೂಲವಾಗುವ ಬಗ್ಗೆ ಮನವರಿಕೆ ಮಾಡಿಕೊಡಲಾಗಿದೆ. ಜಿಲ್ಲೆಯ ಬೆಳೆಗಾರರ ಸಂಕಷ್ಟಗಳ ನಿವಾರಣೆಗೆ ಸರ್ಕಾರದೊಂದಿಗೆ ವ್ಯವಹರಿಸಲು ಶಾಸಕ ಅಪ್ಪಚ್ಚುರಂಜನ್ ಸಹಕರಿಸಿದ್ದಾರೆ ಎಂದು ತಿಳಿಸಿದರು.
ಮರ ಬಿದ್ದು ಹಾನಿ
ಅತಿವೃಷ್ಟಿಯ ಸಂದರ್ಭ ಕಾಫಿ ಮಂಡಳಿ ಕೇವಲ ಮಳೆಯಿಂದ ಬೆಳೆ ನಷ್ಟವಾದ ಬಗ್ಗೆ ಮಾಹಿತಿ ಪಡೆಯುತ್ತದೆ. ಆದರೆ ಭಾರೀ ಗಾಳಿಯಿಂದ ಮರಗಳು ಬೀಳುವಾಗ ಅನೇಕ ಕಾಫಿಗಿಡಗಳು ಹಾನಿಗೀಡಾಗಿ ನಷ್ಟ ಉಂಟಾಗುತ್ತಿದೆ. ಆದ್ದರಿಂದ ಮರಗಳು ಬಿದ್ದು ಉಂಟಾದ ಹಾನಿಯನ್ನು ಕೂಡ ಪರಿಗಣಿಸಬೇಕೆಂದು ಕಾರ್ಯಪ್ಪ ಇದೇ ಸಂದರ್ಭ ಮನವಿ ಮಾಡಿದರು.
ಒಕ್ಕೂಟದ ಸಂಯೋಜಕ ಎ.ನಂದಾ ಬೆಳ್ಳಿಯಪ್ಪ ಮಾತನಾಡಿ, ಜಿಲ್ಲೆಯ ಬೆಳೆಗಾರರ ಸಂಕಷ್ಟಗಳ ಬಗ್ಗೆ ಸರ್ಕಾರಗಳ ಗಮನ ಸೆಳೆÉಯುವ ಉದ್ದೇಶದಿಂದ ಕೊಡಗು ಬೆÀಳೆಗಾರರ ಒಕ್ಕೂಟ, ಕೊಡಗು ಪ್ಲಾಂಟರ್ಸ್ ಅಸೋಸಿಯೇಶನ್, ಸೋಮವಾರಪೇಟೆ ಬೆಳೆÉಗಾರರ ಒಕ್ಕೂಟ, ಶನಿವಾರಸಂತೆ ಬೆಳೆಗಾರರ ಸಂಘಗÀಳನ್ನು ಒಗ್ಗೂಡಿಸಿ ಕೊಡಗು ಬೆಳೆಗಾರರ ಸಂಘಟನೆಗಳ ಒಕ್ಕೂಟವನ್ನು ರಚಿಸಿ ಪರಿಹಾರಕ್ಕಾಗಿ ಪ್ರಯತ್ನಿಸುತ್ತಿರುವುದಾಗಿ ಹೇಳಿದರು.
ಸಂಸದರ ಪ್ರಯತ್ನ ಸಾಲದು
ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರದ ಮಟ್ಟದಲ್ಲಿ ಗಮನ ಸೆಳೆಯಲು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಸಂಸದ ಪ್ರತಾಪ್ ಸಿಂಹ ಅವರಿಗೆ ಎಲ್ಲಾ ಅವಕಾಶಗಳಿದ್ದರೂ ಅವರಿಂದ ನಿರೀಕ್ಷಿತ ಸ್ಪಂದನೆ ದೊರೆತ್ತಿಲ್ಲ ಮತ್ತು ಅವರ ಪ್ರಯತ್ನ ಸಾಲದು ಎಂದು ನಂದಾ ಬೆಳ್ಳಿಯಪ್ಪ ಬೇಸರ ವ್ಯಕ್ತಪಡಿಸಿದರು.
ಬೆÉÉಳೆಗಾರರ ಸಮಸ್ಯೆಗಳ ಬಗ್ಗೆ ನೂತನ ಒಕ್ಕೂಟದ ಮೂಲಕ ಸಂಸದರಿಗೆ ಮನವರಿಕೆ ಮಾಡಿಕೊಡಲಾಗಿದೆ. ಬೆಳೆಗಾರರು ಅನುಭವಿಸುತ್ತಿರುವ ಕಷ್ಟ, ನಷ್ಟಗಳ ಬಗ್ಗೆ ಹಿಂದಿನಿಂದಲೂ ವಿವರಿಸುತ್ತಾ ಬರಲಾಗಿದೆ ಎಂದರು.
ಕಾಫಿ, ಕರಿಮೆಣಸು ಬೆಳೆಗಳನ್ನು ಒಳಗೊಂಡಂತೆ ವಿವಿಧ ತೋಟಗಾರಿಕಾ ಬೆಳೆಗಳ ಬೆಳೆಗಾರರು ಹಾಗೂ ಸಂಸ್ಕರಣಕಾರರ ಅನುಕೂಲಕ್ಕಾಗಿ ಶೇ.20 ರ ಹೆಚ್ಚುವರಿ ನೆರವನ್ನು ಕೇಂದ್ರದ ಹಣಕಾಸು ಇಲಾಖೆ ಒದಗಿಸಬೇಕೆಂದು ಈ ಹಿಂದಿನಿಂದಲೂ ಬೇಡಿಕೆಯನ್ನು ಮುಂದಿಟ್ಟುಕೊಂಡು ಬರಲಾಗಿದೆ. ಈ ವಿಚಾರವನ್ನು ಸಂಸದರು ಕೇಂದ್ರದೊಂದಿಗೆ ಪ್ರಸ್ತಾಪಿಸಿ ನೆರವಿಗೆ ಮುಂದಾಗಬೇಕೆಂದು ನಂದಾ ಬೆಳ್ಳಿಯಪ್ಪ ಒತ್ತಾಯಿಸಿದರು.
ಸೋಮವಾರಪೇಟೆ ತಾಲೂಕು ಬೆಳೆಗಾರರ ಸಂಘದ ಅಧ್ಯಕ್ಷ ಮೋಹನ್ ಬೋಪಣ್ಣ ಅವರು ಮಾತನಾಡಿ, ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಮುಂಗಾರಿನ ಅವಧಿಯಲ್ಲಿ ಮರಗಳು ಬೀಳುವುದರಿಂದ ತಿಂಗಳಾನುಗಟ್ಟಲೆ ವಿದ್ಯುತ್ ಕಡಿತ ಉಂಟಾಗುತ್ತಿದೆ. ಸಮಸ್ಯೆಯ ನಿವಾರಣೆಗೆ ವಿದ್ಯುತ್ ಕೇಬಲ್‍ಗಳನ್ನು ಭೂಮಿಯ ಒಳಗೆ ಅಳವಡಿಸುವ ಕಾರ್ಯ ನಡೆಸಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಾಸಕರು ಆಸಕ್ತರಾಗಬೇಕೆಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಪದಾಧಿಕಾರಿ ಎನ್.ಎಂ.ದಿನೇಶ್ ಉಪಸ್ಥಿತರಿದ್ದರು.