ಸೋಮವಾರಪೇಟೆ, ಸೆ. 19: ತಾಲೂಕು ದಲಿತ ಹಿತರಕ್ಷಣಾ ಒಕ್ಕೂಟದ ಕೊಡ್ಲಿಪೇಟೆ ಹೋಬಳಿ ಅಧ್ಯಕ್ಷರಾಗಿ ಡಿ.ಎಸ್. ನವೀನ್‍ಕುಮಾರ್, ಕಾರ್ಯದರ್ಶಿಯಾಗಿ ಡಿ.ಸಿ. ವಸಂತ್ ಆಯ್ಕೆಯಾಗಿದ್ದಾರೆ.

ಕೊಡ್ಲಿಪೇಟೆಯ ಅಂಬೇಡ್ಕರ್ ಭವನದಲ್ಲಿ ತಾಲೂಕು ದಲಿತ ಹಿತರಕ್ಷಣಾ ಒಕ್ಕೂಟದ ಅಧ್ಯಕ್ಷ ವಸಂತ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ನೇಮಿಸಲಾಯಿತು.

ಉಪಾಧ್ಯಕ್ಷರಾಗಿ ವಿಜಯ, ವಸಂತರಾಜು, ಜಯರಾಂ, ಸಹಕಾರ್ಯದರ್ಶಿಯಾಗಿ ಸತ್ಯಪ್ರಕಾಶ್, ಖಜಾಂಚಿಯಾಗಿ ಡಿ.ಎಸ್. ಮಹೇಶ್ ಆಯ್ಕೆಯಾದರು. ಕಾರ್ಯಕಾರಿ ಸಮಿತಿ ಸದಸ್ಯರಾಗಿ ಕೇಶವ, ವೀರಭದ್ರ, ರಾಜು, ನಾಗೇಶ್, ಲೋಕೇಶ್, ಸತೀಶ, ನೂತನ್, ಕುಮಾರ ನೇಮಕಗೊಂಡರು.

ಸಭೆಯಲ್ಲಿ ಜಿಲ್ಲಾ ಸಮಿತಿಯ ಅಧ್ಯಕ್ಷÀ ನಿರ್ವಾಣಪ್ಪ, ಪದಾಧಿಕಾರಿಗಳಾದ ಜಯಪ್ಪ ಹಾನಗಲ್ಲು, ಮಂಜುನಾಥ್, ವೇದಕುಮರ್, ಜಗದೀಶ್, ಕೆಂಚೇಶ್ವರ ಮತ್ತಿತರರು ಉಪಸ್ಥಿತರಿದ್ದರು.