ವೀರಾಜಪೇಟೆ, ಸೆ.19: ವೀರಾಜಪೇಟೆ ಬಳಿಯ ಹೆಗ್ಗಳ ಗ್ರಾಮದ ಪಿ.ಎಚ್. ಸದಾನಂದ ಎಂಬವರ ಕಾಫಿ ತೋಟದಲ್ಲಿ ಗಿಡಗಳ ಮಧ್ಯೆ 12 ಅಡಿ ಉದ್ದದ 15 ಕೆ.ಜಿಗೂ ಅಧಿಕ ತೂಕದ ಭಾರಿ ಹೆಬ್ಬಾವು ಪತ್ತೆಯಾಗಿದ್ದು, ಉರಗ ತಜ್ಞ ಶರತ್ ಅದನ್ನು ಹಿಡಿದು ಮಾಕುಟ್ಟ ಅಭಯಾರಣ್ಯಕ್ಕೆ ಬಿಟ್ಟಿದ್ದಾರೆ.