ಸಿದ್ದಾಪುರ, ಸೆ. 18: ಸಿದ್ದಾಪುರ ಲಯನ್ಸ್ ಕ್ಲಬ್ ವತಿಯಿಂದ ಕ್ಲಬ್‍ನ ಸಭಾಂಗಣದಲ್ಲಿ ಶಿಕ್ಷಕರ ದಿನಾಚರಣೆ ಅಂಗವಾಗಿ ಮೂವರು ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಶಿಕ್ಷಕಿಯರಾದ ಡಯಾನ ಸೋಮಯ್ಯ, ಎಂ.ಬಿ. ದೇಚಮ್ಮ, ಚಿತ್ರ ಜೀವನ್ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭ ಸಿದ್ದಾಪುರ ಲಯನ್ಸ್ ಕ್ಲಬ್‍ನ ಅಧ್ಯಕ್ಷರಾದ ಕುಶಿ ಭೀಮಯ್ಯ, ಕಾರ್ಯದರ್ಶಿ ನಮಿತಾ ಅಯ್ಯಪ್ಪ, ಖಜಾಂಚಿ ವಿದ್ಯಾ ದೇವಯ್ಯ ಹಾಗೂ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು ಹಾಗೂ ಸದಸ್ಯರುಗಳು ಹಾಜರಿದ್ದರು.