ಶನಿವಾರಸಂತೆ, ಸೆ. 18: ಫೇಸ್ ಬುಕ್ಕಿನಲ್ಲಿ ಕೊಡಗನ್ನಾಳಿದ ವೀರಶೈವ ರಾಜರ ಬಗ್ಗೆ ಅವಹೇಳನಕಾರಿ ಪೋಸ್ಟ್ ಹಾಕಿದ್ದ ಕೊಡಗು ರಕ್ಷಣಾ ವೇದಿಕೆಯ ಅಧ್ಯಕ್ಷ ಪವನ್ ಪೆಮ್ಮಯ್ಯ ವೀರಶೈವ ಮಹಾಸಭಾ ಮುಖಂಡರ ಕ್ಷಮೆ ಕೋರಿ ಲಿಖಿತ ಹೇಳಿಕೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್ ಅವರು ಪವನ್ ಪೆಮ್ಮಯ್ಯ ವೀರಶೈವ ರಾಜರ ಬಗ್ಗೆ ಫೇಸ್‍ಬುಕ್ಕಿನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದನ್ನು ಖಂಡಿಸಿ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪವನ್ ಪೇಮಯ್ಯ ಬಹಿರಂಗವಾಗಿ ಕ್ಷಮೆ ಕೋರಬೇಕು ಇಲ್ಲವಾದಲ್ಲಿ ಜಿಲ್ಲೆ ಹಾಗೂ ಗ್ರಾಮಮಟ್ಟದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದ್ದರು.
ಈ ಹಿನ್ನೆಲೆಯಲ್ಲಿ ಠಾಣೆಗೆ ಹಾಜರಾಗಿ ಕ್ಷಮೆ ಕೋರಿದ ಪವನ್ ಪೆಮ್ಮಯ್ಯ ಫೇಸ್ ಖಾತೆಯಲ್ಲಿ ಅಳಿಸಿ ಹಾಕಿದ್ದು, ಪತ್ರಿಕಾ ಮಾಧ್ಯಮದ ಮುಖಾಂತರ ಕ್ಷಮೆ ಯಾಚರಿಸಿರುವದಾಗಿ ಹೆಡ್‍ಕಾನ್ಸ್‍ಟೇಬಲ್ ಎಂ.ಬಿ. ರವಿಚಂದ್ರ ಅವರಿಗೆ ಲಿಖಿತ ಹೇಳಿಕೆ ನೀಡಿದರು.
ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಜಿ.ಎಂ. ಕಾಂತರಾಜ್ ಪದಾಧಿಕಾರಿಗಳಾದ ಡಿ.ಬಿ. ಧರ್ಮಪ್ಪ, ಕೆ.ಬಿ. ಹಾಲಪ್ಪ, ವೀರೇಂದ್ರ, ಶರತ್‍ಚಂದ್ರ, ನಟರಾಜ್, ಮೂರ್ತಿ, ಮಹೇಶ್, ಬಸವರಾಜ್ ಇತರ 100 ಮಂದಿ ಹಾಜರಿದ್ದರು.