ಮಡಿಕೇರಿ, ಸೆ. 17: ರಾಷ್ಟ್ರದ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟು ಹಬ್ಬದ ಪ್ರಯುಕ್ತ ಬಿಜೆಪಿ ಪಕ್ಷ ಹಾಗೂ ವಿವಿಧ ಮೋರ್ಚಾ ವತಿಯಿಂದ ವಿವಿಧ ಕಾರ್ಯಕ್ರಮಗಳೊಂದಿಗೆ ಆಚರಿಸಲಾಗಿದೆ.

ಮಡಿಕೇರಿ: ಮಡಿಕೇರಿ ನಗರ ಬಿಜೆಪಿ ವತಿಯಿಂದ ಪ್ರಧಾನಿ ನರೇಂದ್ರ ಮೋದಿ ಅವರ 70ನೇ ಹುಟ್ಟುಹಬ್ಬದ ಪ್ರಯುಕ್ತ ಮಡಿಕೇರಿ ಯ ಜಿಲ್ಲಾ ಆಸ್ಪತ್ರೆ (ಅಶ್ವಿನಿ ) ಯಲ್ಲಿ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ಹಂಪಲು ವಿತರಿಸಲಾಯಿತು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ ನಗರ ಅಧ್ಯಕ್ಷ ಮನು ಮಂಜುನಾಥ್, ಜಿಲ್ಲಾ ವಕ್ತಾರ ಮಹೇಶ್ ಜೈನಿ, ಜಿಲ್ಲಾ ಉಪಾಧ್ಯಕ್ಷ ಬಿ.ಕೆ. ಅರುಣ್ ಕುಮಾರ್, ನಗರ ಪ್ರಧಾನ ಕಾರ್ಯದರ್ಶಿ ಉಮೇಶ್ ಸುಬ್ರಮಣಿ, ಕೆ.ಎಂ. ಅಪ್ಪಣ್ಣ, ಮಹಿಳಾ ಮೋರ್ಚಾದ ಅಧ್ಯಕ್ಷೆ ಸವಿತಾ ರಾಕೇಶ್, ಅನಿತಾ ಪೂವಯ್ಯ, ಕನ್ನಿಕೆ, ಪ್ರೇಮ, ರಾಘವಯ್ಯ, ಜೀವನ್, ಕೆ.ಎಸ್, ರಮೇಶ್, ಜಗದೀಶ್, ದಿಶು ಸುಬ್ರಮಣಿ, ಯುವ ಮೋರ್ಚಾ ಅಧ್ಯಕ್ಷ ನವೀನ್ ಪೂಜಾರಿ ಹಾಜರಿದ್ದರು.

ಮಡಿಕೇರಿ: ಬಿಜೆಪಿ ಮಡಿಕೇರಿ ಗ್ರಾಮಾಂತರ ಮಂಡಲ ವತಿಯಿಂದ ಮೂರ್ನಾಡುವಿನ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳಿಗೆ, ವೈದ್ಯಕೀಯ ಸಿಬ್ಬಂದಿಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು. ಆರೋಗ್ಯ ಕೇಂದ್ರದ ಸುತ್ತಮುತ್ತ ಕಸ ಕಡ್ಡಿಗಳನ್ನು ಹೆಕ್ಕಿ ಕಾಡು ಗಿಡಗಳನ್ನು ಕಡಿದು ಸ್ವಚ್ಛ ಮಾಡಲಾಯಿತು. ಈ ಸಂದರ್ಭದಲ್ಲಿ ಮಡಿಕೇರಿ ಗ್ರಾಮಾಂತರ ಭಾಗದ ಸೇವಾ ಸಪ್ತಾಹ ಕಾರ್ಯಕ್ರಮದ ಪ್ರಮುಖ್ ರಾದ ನೆಲ್ಲಚಂಡ ಕಿರಣ್, ಬಿಜೆಪಿ ತಾಲೂಕು ಗ್ರಾಮಾಂತರ ಮಂಡಲ ಅಧ್ಯಕ್ಷ ಕಾಂಗೀರ ಸತೀಶ್ ಅಶ್ವಿ, ತಾಲೂಕು ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಸನ್ನ, ಹಿಂದುಳಿದ ವರ್ಗಗಳ ಅಧ್ಯಕ್ಷ ಕೊಲೆಯಂಡ ಗಿರೀಶ್, ಮಡಿಕೇರಿ ತಾಲೂಕು ಯುವ ಮೋರ್ಚಾ ಅಧ್ಯಕ್ಷ ಹೇಮಂತ್ ತೋರೆರ, ಮೂರ್ನಾಡು ಮತ್ತು ಕೆ. ಬಾಡಗ ಶಕ್ತಿ ಕೇಂದ್ರದ ಪ್ರಮುಖ್ ಸಹ ಪ್ರಮುಖರು , ಪಕ್ಷದ ಹಿರಿಯರು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗೋಣಿಕೊಪ್ಪಲು: ಗೋಣಿಕೊಪ್ಪಲು ಸಮೀಪದ ಕೈಕೇರಿ ಭಗವತಿ ದೇವಾಲಯದ ಆವರಣದಲ್ಲಿ ಜಿಲ್ಲಾ ಪಂಚಾಯ್ತಿ ಸದಸ್ಯ ಸಿ.ಕೆ.ಬೋಪಣ್ಣ ಮುಂದಾಳತ್ವದಲ್ಲಿ ತೆಂಗಿನ ಗಿಡಗಳನ್ನು ನೆಡುವ ಮೂಲಕ ಆಚರಿಸಲಾಯಿತು. ಕ್ಷೇತ್ರದ ಶಾಸಕ ಕೆ.ಜಿ.ಬೋಪಯ್ಯ ಗಿಡ ನೆಡುವ ಮೂಲಕ ಚಾಲನೆ ನೀಡಿದರು.

ಶಾಸಕ ಕೆ.ಜಿ.ಬೋಪಯ್ಯ ಮಾತನಾಡಿ ಪ್ರಧಾನಿಗಳ ಹುಟ್ಟುಹಬ್ಬದ ನೆನಪಿನಲ್ಲಿ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ಕ್ಷೇತ್ರದಲ್ಲಿ ಬಿಜೆಪಿಯ ವಿವಿಧ ಮೋರ್ಚಗಳು ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ ಎಂದರು.

ಈ ಸಂದರ್ಭ ಬಿಜೆಪಿ ಮಂಡಲ ಪ್ರಮುಖರಾದ ಕೊಕ್ಕಂಡ ಲವ ಭೀಮಯ್ಯ, ಬಿಜೆಪಿ ತಾಲೂಕು ಉಪಾಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ, ಬೂತ್ ಮಟ್ಟದ ಅಧ್ಯಕ್ಷ ಕುಪ್ಪಂಡ ಕೃಷ್ಣ, ಭೀಮಯ್ಯ,ಕೊಕ್ಕಂಡ ಕುಶ, ಕುಪ್ಪಂಡ ಮುತ್ತಣ್ಣ, ವಿನೋದ್,ರಾಜು, ಕುಲ್ಲಚೆಟ್ಟಿರ ರಘು, ಜಮ್ಮಡ ಹೇಮ, ಆರ್‍ಎಂಸಿ ಸದಸ್ಯ ಸುಬ್ರಮಣಿ, ಸಣ್ಣುವಂಡ ಲೋಕೇಶ್, ಸುರೇಶ್, ತಾಲೂಕು ಯುವ ಮೋರ್ಚ ಅಧ್ಯಕ್ಷ ಸೋಮೆಯಂಗಡ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ರಂಜನ್ ಪೊನ್ನಣ್ಣ, ಸೀನು, ಹಾಜರಿದ್ದರು.

ಮುಳ್ಳೂರು: ಹಂಡ್ಲಿ ಗ್ರಾ.ಪಂ.ಕಚೇರಿ ಎದುರು, ಸರಕಾರಿ ಪ್ರಾಥಮಿಕ ಶಾಲೆ ಮತ್ತು ಗ್ರಾ.ಪಂ.ಆವರಣದ ಜಾಗದಲ್ಲಿ ವಿವಿಧ ಉಪಯುಕ್ತ ಹಣ್ಣಿನ ಗಿಡನೆಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಹಂಡ್ಲಿ ಬಿಜೆಪಿ ಬೂತ್ ಸಮಿತಿ ಮತ್ತು ಮೋದಿ ಅಭಿಮಾನಿಗಳ ಬಳಗದ ವತಿಯಿಂದ ನಡೆದ ಕಾರ್ಯಕ್ರಮವನ್ನು ಹಿರಿಯ ಬಿಜೆಪಿ ಮುಖಂಡ ಕೆ.ವಿ.ಮಂಜುನಾಥ್ ಉದ್ಘಾಟಿಸಿ ಮಾತನಾಡಿದರು.

ತಾಲೂಕು ಬಿಜೆಪಿ ವಕ್ತಾರ ಎಸ್.ಎನ್.ರಘು, ಸ್ಥಳೀಯ ಬಿಜೆಪಿ ಪ್ರಮುಖರಾದ ಕೆ.ಎಂ.ವಿನೂತ್‍ಶಂಕರ್, ಎಸ್.ಎಸ್.ಗಣೇಶ್, ಸುನಿಲ್, ಮೂರ್ತಿ, ಬಿಜೆಪಿ ಕಾರ್ಯಕರ್ತರು, ಮೋದಿ ಅಭಿಮಾನಿಗಳು ಹಾಜರಿದ್ದರು. ಈ ಸಂದರ್ಭದಲ್ಲಿ ಶಾಲಾ ಆವರಣ ಮತ್ತು ಗ್ರಾ.ಪಂ.ಕಚೇರಿ ಆವರಣದ ಜಾಗದಲ್ಲಿ ವಿವಿಧ ಹಣ್ಣಿನ ಗಿಡಗಳನ್ನು ನೆಡಲಾಯಿತು. ಗುಡುಗಳಲೆ ಜಂಕ್ಷನ್‍ನಲ್ಲಿ ಮೋದಿ ಅವರ ಜನುಮ ದಿನವನ್ನು ಆಚರಿಸಲಾಯಿತು. ದಿನದ ಅಂಗವಾಗಿ ಬಿಜೆಪಿ ಕಾರ್ಯಕರ್ತರು ರಸ್ತೆ ಬದಿಯಲ್ಲಿ ಸ್ವಚ್ಛತಾ ಶ್ರಮದಾನ ಕಾರ್ಯದಲ್ಲಿ ಭಾಗಿಯಾದರು.

ಪೆರಾಜೆ: ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಪೆರಾಜೆಯ ಜ್ಯೋತಿ ಪ್ರೌಢ ಶಾಲಾ ಆವರಣದಲ್ಲಿ ಗಿಡ ನೆಡುವ ಕಾರ್ಯಕ್ರಮ ಹಾಗೂ ಆವರಣದಲ್ಲಿ ಬೆಳೆದಿರುವ ಕಳೆ ಗಿಡ ಗಂಟಿಗಳನ್ನು ಕಿತ್ತು ಸ್ವಚ್ಛತಾ ಕಾರ್ಯ ಅಡಿಯಲ್ಲಿ ಶ್ರಮದಾನ ಹಮ್ಮಿಕೊಳ್ಳಲಾಯಿತು.

ಈ ಕಾರ್ಯದಲ್ಲಿ ಪೆರಾಜೆ ಶಕ್ತಿ ಕೇಂದ್ರದ ಅಧ್ಯಕ್ಷ ನಂಜಪ್ಪ ನಿಡ್ಯಮಲೆ, ಕಾರ್ಯದರ್ಶಿ ಧನಂಜಯ ಕೋಡಿ, ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜ್ಯೋತಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ದೊಡ್ಡಣ್ಣ ಬರಮೇಲು, ಹಿರಿಯ ಬಿಜೆಪಿ ನಾಯಕರಾದ ಹೊನ್ನಪ್ಪ ಅಮೆಚೂರು, ಮಡಿಕೇರಿ ತಾಲೂಕು ಭಾಜಪ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಮಡಿಕೇರಿ ಗ್ರಾಮಾಂತರ ಬಿಜೆಪಿ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಮಹೇಶ ಮೂಲೆಮಜಲು ಇನ್ನಿತರರು ಭಾಗವಹಿಸಿದ್ದರು.

ಕರಿಕೆ: ಇಲ್ಲಿನ ಬಿ.ಜೆ.ಪಿ ಶಕ್ತಿ ಕೇಂದ್ರದ ವತಿಯಿಂದ ದೇಶದ ಕರಿಕೆ ಎಳ್ಳುಕೊಚ್ಚಿಯ ಮುಖ್ಯ ರಸ್ತೆ ಬದಿ ಕಸ, ಪ್ಲಾಸ್ಟಿಕ್ ತ್ಯಾಜ್ಯ ಹೆಕ್ಕಿ ಸ್ವಚ್ಛತಾ ಕಾರ್ಯ ಮಾಡುವುದರ ಮೂಲಕ ಆಚರಿಸಲಾಯಿತು. ಈ ಸಂದರ್ಭದಲ್ಲಿ ಕರಿಕೆ ಶಕ್ತಿ ಕೇಂದ್ರದ ಪ್ರಮುಖ್ ಹೊಸಮನೆ ಹರೀಶ್, ಸಹಪ್ರಮುಖ್ ವಿಜಯ, ಜಿ.ಪಂ.ಸದಸ್ಯೆ ಕವಿತಾ ಪ್ರಭಾಕರ್, ಪ್ರಮುಖರಾದ ಐಸಾಕ್, ರಾಜೇಂದ್ರ, ನಿಡ್ಯಮಲೆ ರವಿ, ಪಾಂಡಿ ನಂಜುಂಡ ಸೇರಿದಂತೆ ಇತರೆ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಪೆರಾಜೆ: ಕೊಡಗು ಜಿಲ್ಲಾ ಕೃಷಿ ಮೋರ್ಚಾ ವತಿಯಿಂದ ಪೆರಾಜೆಯ ಜ್ಯೋತಿ ಪ್ರೌಢ ಶಾಲಾ ಪುಸ್ತಕ ಭಂಡಾರಕ್ಕೆ ಹಲವು ಪುಸ್ತಕಗಳನ್ನು ಕೊಡುಗೆಯಾಗಿ ನೀಡುವುದರ ಮೂಲಕ ಆಚರಿಸಲಾಯಿತು.

ಈ ಸಂದರ್ಭ ಜಿಲ್ಲಾ ಕೃಷಿ ಮೋರ್ಚಾದ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ, ಜ್ಯೋತಿ ಪ್ರೌಢ ಶಾಲಾ ಮುಖ್ಯೋಪಾಧ್ಯಾಯ ದೊಡ್ಡಣ್ಣ ಬರಮೇಲು, ಪೆರಾಜೆ ಶಕ್ತಿ ಕೇಂದ್ರದ ಅಧ್ಯಕ್ಷÀ ನಂಜಪ್ಪ ನಿಡ್ಯಮಲೆ, ಮಡಿಕೇರಿ ತಾ. ಭಾಜಪ ಕಾರ್ಯದರ್ಶಿ ಪ್ರಸನ್ನ ನೆಕ್ಕಿಲ, ಪದಾಧಿಕಾರಿಗಳಾದ ಧನಂಜಯ ಕೋಡಿ, ಮಡಿಕೇರಿ ಗ್ರಾಮಾಂತರ ಬಿಜೆಪಿ ಯುವ ಮೋರ್ಚ ಪ್ರಧಾನ ಕಾರ್ಯದರ್ಶಿ ಮಹೇಶ ಮೂಲೆಮಜಲು, ಪದಾಧಿಕಾರಿಗಳಾದ ಪ್ರವೀಣ ಮಜಿಕೋಡಿ, ಮಾಜಿ ಗ್ರಾ.ಪಂ. ಸದಸ್ಯ ಚಿನ್ನಪ್ಪ ಅಡ್ಕ, ಉದಯಚಂದ್ರ ಕುಂಬಳಚೇರಿ, ಬೂತ್ ಅಧ್ಯಕ್ಷÀ ಶುಭಾಶ್ ಬಂಗಾರಕೋಡಿ, ಸೀತಾರಾಮ ಕದಿಕಡ್ಕ, ಅನಿಲ್ ಕುಂಬಳಚೇರಿ ಮತ್ತಿತರರು ಇದ್ದರು.

ಕೂಡಿಗೆ: ಕೂಡಿಗೆ ಮತ್ತು ಕೂಡುಮಂಗಳೂರು ಬಿಜೆಪಿ ಘಟಕದ ವತಿಯಿಂದ ವೃದ್ಧಾಶ್ರಮದಲ್ಲಿರುವ ವಯೋವೃದ್ಧರಿಗೆ ಹಣ್ಣು ಹಂಪಲುಗಳನ್ನು ವಿತರಣೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಮಂಡಲ ಉಪಾಧ್ಯಕ್ಷ ಕೆ. ವರದ, ಕೂಡುಮಂಗಳೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಾಂಚೀರ ಮನು, ನಂಜುಂಡ ಬಸವತ್ತೂರು, ಬೂತ್ ಅಧ್ಯಕ್ಷ ಆರ್. ಕೃಷ್ಣ, ಪ್ರಧಾನ ಕಾರ್ಯದರ್ಶಿ ಪ್ರವೀಣ್‍ಕುಮಾರ್, ಬಿ.ಬಿ. ರವಿ, ಶಿವಣ್ಣ ಗೌಡ, ರಾಜು ಕುಂಟಾಣಿ, ಬಜರಂಗದಳದ ತಾಲೂಕು ಸಂಚಾಲಕ ರಾಜೀವ್, ರೂಪೇಶ್, ಗಣಪತಿ, ಕಿರಣ್, ಶಕ್ತಿ ಮಹಿಳಾ ಮೋರ್ಚಾದ ಪ್ರಮುಖರಾದ ಸಾವಿತ್ರಿ ರಾಜನ್, ಕೆ. ಕನಕ, ಗೌರಮ್ಮ, ಜಯಣ್ಣ ಸೇರಿದಂತೆ ವಿವಿಧ ಘಟಕಗಳ ಅಧ್ಯಕ್ಷರುಗಳು, ಕಾರ್ಯಕರ್ತರುಗಳು ಭಾಗವಹಿಸಿದ್ದರು.

ಭಾಗಮಂಡಲ: ಭಾಗಮಂಡಲ ಬಿಜೆಪಿ ವತಿಯಿಂದ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಚರಿಸಲಾಯಿತು.ಭಾಗಮಂಡಲ ಪಟ್ಟಣದಿಂದ ಜಂಕ್ಷನ್ ವರೆಗೆ ಹಾಗೂ ನಾಪೋಕ್ಲು ರಸ್ತೆಯಲ್ಲಿನ ಗಿಡ ಗಂಟಿಗಳನ್ನು ಕಡಿದು ರಸ್ತೆಯನ್ನು ಸ್ವಚ್ಛಗೊಳಿಸಲಾಯಿತು.

ಭಾಗಮಂಡಲ ಮೇಲ್ಸೇತುವೆ ಕಾಮಗಾರಿಯಿಂದಾಗಿ ರಸ್ತೆಗಳು ಹೊಂಡಗಳಾಗಿದ್ದು ಕಾರ್ಯಕರ್ತರು ಗುಂಡಿಗಳನ್ನು ಮುಚ್ಚಿ ರಸ್ತೆ ದುರಸ್ತಿ ಪಡಿಸಿದರು. ಸ್ವಚ್ಛತಾ ಕಾರ್ಯಕ್ರಮದ ಬಳಿಕ ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪಿ.ಎಂ.ರಾಜೀವ್, ಯುವಮೋರ್ಚಾದ ಅಧ್ಯಕ್ಷ ಕಾಳನ ರವಿ, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ಪುರುಷೋತ್ತಮ, ಆಟೋ ಚಾಲಕರ ಸಂಘದ ಭವನ್ ಕುಮಾರ್, ಚಲನ್, ಪ್ರಮುಖರಾದ ಶ್ರೀಧರ್, ವನು ಹಾಗೂ ಕಾರ್ಯಕರ್ತರು ಪಾಲ್ಗೊಂಡಿದ್ದರು.

ಗುಡ್ಡೆಹೊಸೂರು: ಇಲ್ಲಿಗೆ ಸಮೀಪದ ಬಸವನಹಳ್ಳಿಯ ಆಶ್ರಮ ಶಾಲಾ ಆವರಣದಲ್ಲಿ ಪ್ರಧಾನಿ ಮೋದಿಜೀಯವರ 70ನೇ ವರ್ಷದ ಹುಟ್ಟುಹಬ್ಬವನ್ನು ಗಿಡಗಳನ್ನು ನೆಡುವುದರೊಂದಿಗೆ ಆಚರಿಸಲಾಯಿತು. ಶಾಲಾ ಮಕ್ಕಳಿಗೆ ಹಾಡಿ ನಿವಾಸಿಗಳಿಗೆ ಸಿಹಿ ಮತ್ತು ಹಣ್ಣು ಹಂಪಲು ವಿತರಿಸಲಾಯಿತು.

ಈ ಸಂದರ್ಭ ಜಿಲ್ಲಾ ಬಿ.ಜೆ.ಪಿ ಎಸ್‍ಟಿ ಮೋರ್ಚಾ ಅಧ್ಯಕ್ಷ ಮಿಟ್ಟು ರಂಜಿತ್, ರಾಜ್ಯ ಎಸ್‍ಟಿ ಮೋರ್ಚಾ ಕಾರ್ಯದರ್ಶಿ ಮಂಜುಳ, ಜಿಲ್ಲಾ ಕಾರ್ಯದರ್ಶಿ ಪ್ರಭಾಕರ, ತಾಲೂಕು ಅಧ್ಯಕ್ಷ ಮಧು, ಬಿ.ಜೆ.ಪಿ. ಮುಖಂಡ ಬಿ.ಕೆ. ಮೋಹನ, ಲ್ಯಾಂಪ್ಸ್ ಸಂಘದ ಆಧ್ಯಕ್ಷ ಆರ್.ಕೆ.ಚಂದ್ರ ಉಪಾಧ್ಯಕ್ಷ ಮನು, ಬಿ.ಜೆ.ಪಿ ಬೂತ್ ಅಧ್ಯಕ್ಷÀ ಎಂ.ಆರ್.ಮಾದಪ್ಪ, ಗುಡ್ಡೆಹೊಸೂರು ಮಹಿಳಾ ಮೋರ್ಚಾದ ಅಧ್ಯಕ್ಷೆ ಡಾಟಿ,ಶಕ್ತಿ ಕೇಂದ್ರದ ಪ್ರಮುಖ ಕುಮಾರ್,ಬಿ.ಎ.ಗಣೇಶ್, ಮುಂತಾದವರು ಹಾಜರಿದ್ದರು.

ಗೋಣಿಕೊಪ್ಪಲು : ವೀರಾಜಪೇಟೆ ತಾಲೂಕು ಗೋಣಿಕೊಪ್ಪಲುವಿನ ಸರ್ಕಾರಿ ಆಸ್ಪತ್ರೆಯ ಒಳ ರೋಗಿಗಳಿಗೆ ಬಿಜೆಪಿ ತಾಲೂಕು ಯುವ ಮೋರ್ಚಾದ ವತಿಯಿಂದ ಹಣ್ಣು ಹಂಪಲು ವಿತರಿಸಲಾಯಿತು. ವೀರಾಜಪೇಟೆ ತಾಲೂಕು ಮಂಡಲ ಅಧ್ಯಕ್ಷ ನೆಲ್ಲೀರ ಚಲನ್‍ಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಒಳರೋಗಿಗಳಾಗಿ ದಾಖಲಾಗಿರುವ ರೋಗಿಗಳಿಗೆ ಹಣ್ಣು ಹಂಪಲು ವಿತರಿಸಲಾಯಿತು.

ಚಲನ್‍ಕುಮಾರ್ ಮಾತನಾಡಿ ದೇಶದ ಪ್ರಧಾನಿ ಹುಟ್ಟುಹಬ್ಬದ ಸವಿ ನೆನಪಿನಲ್ಲಿ ದೇಶದೆಲ್ಲೆಡೆ ಅನೇಕ ಕಾರ್ಯಕ್ರಮಗಳು ನಡೆಯುತ್ತಿವೆ. ತಾಲೂಕಿನಲ್ಲಿಯೂ ಬಿಜೆಪಿಯ ವಿವಿಧ ಮೋರ್ಚಾಗಳಿಂದ ಕಾರ್ಯಕ್ರಮಗಳು ನಡೆಯುತ್ತಿದ್ದು ಮುಂದಿನ ದಿನದಲ್ಲಿ ಇನ್ನೂ ಹೆಚ್ಚಿನ ಸಾಮಾಜಿಕ ಕಳಕಳಿಯ ಕಾರ್ಯಕ್ರಮಗಳು ನಡೆಯಲಿವೆ ಎಂದರು.

ಈ ವೇಳೆ ಬಿಜೆಪಿ ಜಿಲ್ಲಾ ಖಜಾಂಚಿ ಚೆಪ್ಪುಡೀರ ಮಾಚಯ್ಯ, ತಾಲೂಕು ಪ್ರಧಾನ ಕಾರ್ಯದರ್ಶಿ ವಾಟೇರಿರ ಬೋಪಣ್ಣ, ಉಪಾಧ್ಯಕ್ಷ ಕುಪ್ಪಂಡ ಗಿರೀಶ್ ಪೂವಣ್ಣ, ತಾಲೂಕು ಯುವ ಮೋರ್ಚಾ ಅಧ್ಯಕ್ಷ ಸೋಮೆಯಂಗಡ ಕವನ್ ಕಾರ್ಯಪ್ಪ, ಪ್ರಧಾನ ಕಾರ್ಯದರ್ಶಿ ಭರತ್, ಉಪಾಧ್ಯಕ್ಷ ಪೊನ್ನಣ್ಣ, ನೂರೇರ ರಂಜಿ, ಬಿಜೆಪಿ ಒಬಿಸಿ ಮೋರ್ಚಾದ ತಾಲೂಕು ಅಧ್ಯಕ್ಷ ಕೆ.ರಾಜೇಶ್, ಗೋಣಿಕೊಪ್ಪ ಶಕ್ತಿ ಕೇಂದ್ರದ ಅಧ್ಯಕ್ಷ ಸುರೇಶ್ ರೈ, ಆಸ್ಪತ್ರೆಯ ವೈದ್ಯಾಧಿಕಾರಿಗಳಾದ ಡಾ. ಗ್ರೀಷ್ಮ,ಡಾ.ಸುರೇಶ್.ಸಿಬ್ಬಂದಿಗಳು ಹಾಜರಿದ್ದರು.

ಕುಶಾಲನಗರ : ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಕುಶಾಲನಗರದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಆರೋಗ್ಯ ಕೇಂದ್ರದ ರೋಗಿಗಳಿಗೆ ಹಣ್ಣುಹಂಪಲು ವಿತರಿಸಲಾಯಿತು.

ಕುಶಾಲನಗರ ಪಪಂ ಸದಸ್ಯ ಬಿ.ಅಮೃತ್‍ರಾಜ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಜೆಪಿ ಪ್ರಮುಖರು, ಕಾರ್ಯಕರ್ತರು ಕುಶಾಲನಗರ ಸಮುದಾಯ ಆರೋಗ್ಯ ಕೇಂದ್ರದ ಒಳರೋಗಿಗಳಿಗೆ ಹಣ್ಣುಹಂಪಲು ವಿತರಣೆ ಮಾಡಿದರು. ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ಅಂಗವಾಗಿ ಒಂದು ವಾರಗಳ ಕಾಲ ವಿವಿಧ ಸಾಮಾಜಿಕ ಕಾರ್ಯಕ್ರಮ ಹಮ್ಮಿಕೊಳ್ಳಲು ಯೋಜನೆ ರೂಪಿಸಲಾಗಿದೆ ಎಂದು ಅಮೃತ್‍ರಾಜ್ ಮಾಹಿತಿ ನೀಡಿದರು.

ಈ ಸಂದರ್ಭ ಜಿಪಂ ಸದಸ್ಯೆ ಮಂಜುಳಾ, ಕುಡಾ ಅಧ್ಯಕ್ಷ ಎಂ.ಎಂ.ಚರಣ್, ಸದಸ್ಯರಾದ ವಿ.ಡಿ.ಪುಂಡರೀಕಾಕ್ಷ, ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಪ್ರಮುಖರಾದ ಎಂ.ಎನ್.ಕುಮಾರಪ್ಪ, ಎಂ.ವಿ.ನಾರಾಯಣ್, ಎಂ.ಎಸ್. ಶಿವಾನಂದ, ಕೆ.ಎನ್.ದೇವರಾಜ್, ಉಮಾಶಂಕರ್, ಶಿವಾಜಿ, ನಿಸಾರ್ ಅಹಮ್ಮದ್, ಎಚ್.ಎನ್.ರಾಮಚಂದ್ರ, ಮಣಿ, ಚೆಲುವರಾಜ್, ರಾಜೀವ, ಪ್ರವೀಣ್ ಮತ್ತಿತರರು ಇದ್ದರು.

ಗೋಣಿಕೊಪ್ಪ ವರದಿ: ಮೋದಿ ಜನ್ಮದಿನ ಹಿನ್ನೆಲೆ, ಬಿಜೆಪಿ ವತಿಯಿಂದ ಹಮ್ಮಿಕೊಂಡಿರುವ ಸೇವಾಸಪ್ತಾಹ ಕಾರ್ಯಕ್ರಮ ಅಂಗವಾಗಿ ವೀರಾಜಪೇಟೆ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ಶ್ರೀಮಂಗಲ ಮತ್ತು ಬಿರುನಾಣಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಂಗಳವಾರ ಸ್ವಚ್ಛತಾ ಕಾರ್ಯ ನಡೆಯಿತು.

ಶ್ರೀಮಂಗಲ ನಿರೀಕ್ಷಣ ಮಂದಿರ ಆವರಣ ಮತ್ತು ಬಿರುನಾಣಿ ಕೃಷಿ ಪತ್ತಿನ ಸಹಕಾರ ಸಂಘ ನಿಯಮಿತದ ಆವರಣವನ್ನು ಸ್ವಚ್ಛಗೊಳಿಸಲಾಯಿತು.

ಈ ಸಂದರ್ಭ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಅಧ್ಯಕ್ಷೆ ಮಲಚೀರ ಕವಿತಾ ಜೋಯಪ್ಪ, ಜಿಲ್ಲಾ ಅಧ್ಯಕ್ಷೆ ಚೊಡುಮಾಡ ಶರೀನ್ ಸುಬ್ಬಯ್ಯ, ಜಿಲ್ಲಾ ಉಪಾಧ್ಯಕ್ಷೆ ಸುಮಿ ಸುಬ್ಬಯ್ಯ, ಪ್ರಮುಖರಾದ ರತಿ ಅಚ್ಚಪ್ಪ, ಚೋಕೀರ ಕಲ್ಪನಾ, ಸುಳ್ಳಿಮಾಡ ಶಿಲ್ಪ ಇತರರು ಇದ್ದರು.

ಕೂಡಿಗೆ: ಕೂಡುಮಂಗಳೂರು ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ದೇಶದ ಪ್ರಧಾನಿ ಮಂತ್ರಿ ನರೇಂದ್ರ ಮೋದಿ ಅವರ 70ನೇ ವರ್ಷದ ಹುಟ್ಟು ಹಬ್ಬದ ಅಂಗವಾಗಿ ಕೂಡುಮಂಗಳೂರು ದೊಡ್ಡಮ್ಮ ತಾಯಿ ದೇವಾಲಯದ ಆವರಣದಲ್ಲಿ ಸ್ವಚ್ಛತಾ ಕಾರ್ಯ ಅಡಿಯಲ್ಲಿ ಶ್ರಮದಾನ ಕೈಗೊಳ್ಳಲಾಯಿತು. ದೇವಾಲಯದ ಆವರಣದಲ್ಲಿ ಬೆಳೆದಿದ್ದ ಗಿಡ ಗಂಟೆಗಳನ್ನು ಮತ್ತು ಸುತ್ತಮುತ್ತಲಿನ ಬೇಲಿಕಡಿದು ಸ್ವಚ್ಛತೆ ಮಾಡಲಾಯಿತು.

ಜಿಲ್ಲಾ ಪಂಚಾಯಿತಿ ಸದಸ್ಯೆ ಮಂಜುಳ, ತಾಲೂಕು ಪಂಚಾಯಿತಿ ಸದಸ್ಯ ಗಣೇಶ್, ಕುಶಾಲನಗರ ಆರ್‍ಎಂಸಿ ಮಾಜಿ ಅಧ್ಯಕ್ಷ ಎಂ.ಬಿ. ಜಯಂತ್, ಸಹಕಾರ ಸಂಘದ ಮಾಜಿ ಅಧ್ಯಕ್ಷ ಕೆ.ಕೆ. ಭೋಗಪ್ಪ, ತಾಲೂಕು ಶಕ್ತಿ ಕೇಂದ್ರ ಕಾರ್ಯದರ್ಶಿ ಇಂದಿರಾ ರಮೇಶ್, ತಾಲೂಕು ಬಿಜೆಪಿ ಎಸ್.ಟಿ. ಘಟಕ ಅಧ್ಯಕ್ಷ ಪ್ರಭಾಕರ್, ಪಕ್ಷದ ಪ್ರಮುಖರಾದ ಮಂಜುನಾಥ, ಗುರುಲಿಂಗಪ,್ಪ ಚಂದ್ರು, ಮೂಡ್ಲಿಗೌಡ, ವರದರಾಜ ದಾಸ್, ಕುಮಾರಸ್ವಾಮಿ, ಜ್ಯೋತಿ, ಪ್ರಮೀಳಾ, ಆರ್. ಕೃಷ್ಣ, ಸುಬ್ಬಯ್ಯ, ಧರ್ಮಣ್ಣ, ಲೋಕೇಶ್ ಸೇರಿದಂತೆ ವಿವಿಧ ಘಟಕಗಳ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿದ್ದರು.