ಸೋಮವಾರಪೇಟೆ, ಸೆ. 17: ಅಕ್ರಮವಾಗಿ ಗೋವುಗಳನ್ನು ಸಾಗಾಟಗೊಳಿಸುತ್ತಿದ್ದ ಸಂದರ್ಭ ಸೋಮವಾರಪೇಟೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಆರೋಪಿಗಳು ವಾಹನ ಬಿಟ್ಟು ಪರಾರಿಯಾಗಿರುವ ಘಟನೆ ಇಂದು ನಡೆದಿದೆ.

ಸಮೀಪದ ದೊಡ್ಡತೋಳೂರು ಗ್ರಾಮದಿಂದ ಹಾಸನದ ಕೊಣನೂರಿಗೆ ಅಶೋಕ್ ಲೈಲ್ಯಾಂಡ್ (ಕೆ.ಎ. 54 5317) ವಾಹನದಲ್ಲಿ 8 ಗೋವುಗಳನ್ನು ಅಕ್ರಮವಾಗಿ ಸಾಗಾಟಗೊಳಿಸುತ್ತಿದ್ದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ ಮೇರೆ ಇಂದು ಬೆಳಿಗ್ಗೆ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಈ ಸಂದರ್ಭ ಗೆಜ್ಜೆಹಣಕೋಡು ಜಂಕ್ಷನ್ ಬಳಿಯಲ್ಲಿ ಗೋವುಗಳ ಸಹಿತ ವಾಹನವನ್ನು ಬಿಟ್ಟು ಈರ್ವರು ಆರೋಪಿಗಳು ಪರಾರಿಯಾಗಿದ್ದಾರೆ. ವಶಪಡಿಸಿಕೊಂಡ ಗೋವುಗಳನ್ನು ಭಾಗಮಂಡಲದ ಗೋ ಶಾಲೆಗೆ ಸಾಗಿಸಲಾಗಿದ್ದು, ವಾಹನವನ್ನು ಮುಟ್ಟುಗೋಲು ಹಾಕಿಕೊಂಡು ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ಠಾಣಾಧಿಕಾರಿ ಶಿವಶಂಕರ್, ಸಿಬ್ಬಂದಿಗಳಾದ ಶಶಿಧರ್, ನವೀನ್, ಜಗದೀಶ್ ಅವರುಗಳು ಭಾಗವಹಿಸಿದ್ದರು.