ಕೂಡಿಗೆ, ಸೆ. 16: ಕೂಡುಮಂಗಳೂರು ಗ್ರಾ.ಪಂ. ವ್ಯಾಪ್ತಿಯ ಬಸವತ್ತೂರು ಗ್ರಾಮದಲ್ಲಿ ನಿಗಧಿಯಾದ ಜಾಗದಲ್ಲಿ ಕಸ ವಿಲೇವಾರಿ ಘಟಕವನ್ನು ಪ್ರಾರಂಭಿಸಲು ಈಗಾಗಲೇ ಜಾಗ ಗುರುತಿಸಲಾಗಿದ್ದು, ಘಟಕದ ಆರಂಭಕ್ಕೆ ಬೇಕಾಗುವ ಎಲ್ಲಾ ವ್ಯವಸ್ಥೆಗಳು ನಡೆಯುತ್ತಿವೆ.

ಗ್ರಾ.ಪಂ. ಮಾಸಿಕ ಸಭೆಯಲ್ಲಿ ತೀರ್ಮಾನ ಕೈಗೊಂಡಂತೆ ಬಸವತ್ತೂರು ಗ್ರಾಮದ ತೋಟಗಾರಿಕೆ ಇಲಾಖೆಯ ಸಮೀಪದ ಪೈಸಾರಿ ಜಾಗವನ್ನು ಕಂದಾಯ ಇಲಾಖೆಯ ಮೂಲಕ ಗ್ರಾ.ಪಂ.ಗೆ ವರ್ಗಾವಣೆ ಯಾದ ತಕ್ಷಣ ಘಟಕ ಪ್ರಾರಂಭಕ್ಕೆ ಕ್ರಿಯಾ ಯೋಜನೆಯನ್ನು ತಯಾರಿ ಸಲಾಗಿದೆ. ಇದರಿಂದಾಗಿ. ಹತ್ತು ಲಕ್ಷ ರೂ.ಗಳನ್ನು ಕಾದಿರಿಸಲಾಗಿದೆ. ಅಲ್ಲದೆ ಸುಸಜ್ಜಿತವಾದ ಕಟ್ಟಡ ಮತ್ತು ಒಣಕಸ ಮತ್ತು ಹಸಿಕಸವನ್ನು ಬೇರೆ ಮಾಡುವ ನೂತನ ಮಾದರಿಯ ಯಂತ್ರಗಳನ್ನು ಅಳವಡಿಸಲಾಗುವುದು ಎಂದು ಗ್ರಾಮ ಅಭಿವೃದ್ಧಿ ಅಧಿಕಾರಿ ಆಯಿಷಾ ತಿಳಿಸಿದ್ದಾರೆ.