ಗೋಣಿಕೊಪ್ಪಲು, ಸೆ.16: ವೀರಾಜಪೇಟೆ ತಾಲೂಕಿನ ಚೆಂಬೆ ಬೆಳ್ಳೂರು ಗ್ರಾಮಸ್ಥರು ತಲಕಾವೇರಿ ಕ್ಷೇತ್ರಕ್ಕೆ ತೆರಳಿ ಕಾವೇರಮ್ಮ ಮತ್ತು ಅಗಸ್ತ್ಯೇಶ್ವರನಿಗೆ ಪೂಜೆ ಸಲ್ಲಿಸಿ ನಾಡಿನ ಶ್ರೇಯೋಭಿವೃದ್ಧಿಗಾಗಿ ಪ್ರಾರ್ಥಿಸಿದರು. ನಂತರ ಕೊಳದ ಸುತ್ತ ಹಾಗೂ ದೇವಸ್ಥಾನದ ಹಲವು ಭಾಗಗಳಲ್ಲಿ ಬೆಳೆದಿದ್ದ ಪಾಚಿಗಳನ್ನು ಸ್ವಚ್ಛಗೊಳಿಸಿ ದರು.
ಈ ಕಾರ್ಯದಲ್ಲಿ ಗ್ರಾಮದ ಚೇಂದಂಡ, ಚಾರಿಮಂಡ, ಮಂಡೇಪಂಡ, ಕುಂದಿರ, ಸೋಮೆಯಂಡ, ಚೆಂಬಾಂಡ, ಅಜ್ಜಿನಿಕಂಡ, ಪೂತೆರ, ಪಳಂಗಡ, ಚೀರಂಡ, ಉಳ್ಳಿಯಡ, ಮಾಚಪಂಡ, ಚೊಟ್ಟೆಯಂಡ, ಅವರೆಮಾದಂಡ ಹಾಗೂ ಮಚ್ಚಮಾಡ ಕುಟುಂಬಗಳ ಸದಸ್ಯರು ಭಾಗವಹಿಸಿದ್ದರು. ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡಿದ್ದ ಚೇಂದಂಡ ಶಮ್ಮಿ ಮಾದಯ್ಯ ತಲಕಾವೇರಿ ಮತ್ತು ಭಾಗಮಂಡಲ ತೀರ್ಥ ಕ್ಷೇತ್ರಗಳು ಇವು ಪ್ರವಾಸಿ ತಾಣವಲ್ಲ. ತೀರ್ಥ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವ ಪರಂಪರೆ ಮೊದಲಿ ನಿಂದಲೂ ನಮ್ಮಲ್ಲಿದೆ. ಆದ್ದರಿಂದ ನಾವಿಂದು ಇಲ್ಲಿ ಸ್ವಚ್ಛತಾ ಕಾರ್ಯ ನಡೆಸಿದ್ದೇವೆ” ಎಂದರು.
ತಲಕಾವೇರಿ-ಭಾಗಮಂಡಲ
ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಮತ್ತು ಸಮಿತಿ ಸದಸ್ಯರಾದ ಮಣವಟ್ಟಿರ ದೊರೆ ಸೋಮಣ್ಣ ಅವರು ಮುಂಜಾನೆ ಯಿಂದಲೇ ತೀರ್ಥಯಾತ್ರಿಗಳು ಮತ್ತು ಸ್ವಚ್ಛತಾ ಕಾರ್ಯಕ್ಕೆ ಆಗಮಿಸಿದ್ದವರ ಜೊತೆಗಿದ್ದು, ಚೆಂಬೆಬೆಳ್ಳೂರು ಗ್ರಾಮಸ್ಥರಂತೆ ಕೊಡಗಿನ ಎಲ್ಲಾ ಗ್ರಾಮಸ್ಥರು ಕ್ಷೇತ್ರಕ್ಕೆ ಆಗಮಿಸಿ ಸೇವೆಯನ್ನು ಮಾಡುವಂತಾಗ ಬೇಕೆಂದು ಆಶಿಸಿದರು.
ಈ ಸ್ವಚ್ಛತಾ ಕಾರ್ಯದಲ್ಲಿ ಸ್ವಚ್ಛತಾ ಕಾರ್ಯದಲ್ಲಿ ಊರಿನ ಹಿರಿಯರಾದ ಚೇಂದಂಡ ಬೆಳ್ಯಪ್ಪ, ಚಾರಿಮಂಡ ಪೂಣಚ್ಚ, ಚೇಂದಂಡ ಸನ್ನು, ಚಾರಿಮಂಡ ಶರಣು, ಸೋಮೆಯಂಡ ಅಪ್ಪಿ, ಕುಂದಿರ ರಾಜ, ಪ್ರಮುಖರಾದ ಚೇಂದಂಡ ನವೀನ್, ಚಾರಿಮಂಡ ಬಾನು ಬೋಪಣ್ಣ ಹಾಗೂ ದೇವಸ್ಥಾನ ಆಡಳಿತ ಮಂಡಳಿಯಿಂದ ಮಂಡೇಪಂಡ ಮುತ್ತಪ್ಪ, ಚಾರಿಮಂಡ ಜೀವನ್, ಮಾಚಪಂಡ ಕಿರಣ್, ಚೇಂದಂಡ ಪ್ರವೀಣ್, ಕುಂದಿರ ನೆಹರು, ಚೊಟ್ಟೇಯಂಡ ಉದಯ್, ಮಾಚಪಂಡ ಜಯ, ಕ್ಲೀನ್ ಕೂರ್ಗ್ ಸದಸ್ಯರಾದ ಪಳಂಗಂಡ ಕರಣ್ ಸುಬ್ಬಯ್ಯ, ಚೆಂಬಾಂಡ ಸುನೀಲ್ ಮತ್ತು ಚೇಂದಂಡ ನಿಶ್ಚಿತ್ ಬಿದ್ದಪ್ಪ ಹಾಗೂ ಅನೇಕ ಯುವಕರು ಮತ್ತು ಮಕ್ಕಳು ಭಾಗವಹಿಸಿದ್ದರು.