ಶನಿವಾರಸಂತೆ, ಸೆ. 16: ಸಮೀಪದ ಗ್ರಾಮದ ಭುವನ ಎಂಬವರು ಮಂಜೂರು ಗ್ರಾಮದಲ್ಲಿ ಸಂಬಂಧಿಕರ ಮನೆಯ ಹಬ್ಬ ಮುಗಿಸಿ, ಬೈಕಿನಲ್ಲಿ ತನ್ನ ಊರಿಗೆ ಬರುತ್ತಿದ್ದ ವೇಳೆ ಚಿನ್ನಳ್ಳಿ ಸಾರ್ವಜನಿಕರ ರಸ್ತೆಯಲ್ಲಿ ಎದುರಿನಿಂದ ಬಂದ ಕುಶಾಲಪ್ಪ ಎಂಬವರು ಚಾಲಿಸುತ್ತಿದ್ದ ವ್ಯಾಗನಾರ್ ಕಾರು ಡಿಕ್ಕಿಯಾಗಿದೆ. ಪರಿಣಾಮ ಭುವನ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಶನಿವಾರಸಂತೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.