ಮಡಿಕೇರಿ, ಸೆ. 16: ಕೊಡಗು ಜಿಲ್ಲಾ ಬಿಜೆಪಿ ಪ್ರಭಾರಿಯಾಗಿ ರಾಜ್ಯ ಬಿಜೆಪಿ ಉಪಾಧ್ಯಕ್ಷ ಮೈಸೂರಿನ ಎಂ. ರಾಜೇಂದ್ರ ಅವರನ್ನು ನೇಮಿಸ ಲಾಗಿದೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿಯಾಗಿ ಕೊಡಗಿನಿಂದ ಬಿ.ಬಿ. ಭಾರತೀಶ್, ಹಾಸನ ಜಿಲ್ಲಾ ಪ್ರಭಾರಿಯಾಗಿ ರೀನಾ ಪ್ರಕಾಶ್ ಹಾಗೂ ಮೈಸೂರು ಗ್ರಾಮಾಂತರ ಜಿಲ್ಲಾ ಸಹ ಪ್ರಭಾರಿಯಾಗಿ ರವಿಕುಶಾಲಪ್ಪ ಅವರುಗಳನ್ನು ನೇಮಿಸಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆದೇಶ ಹೊರಡಿಸಿದ್ದಾರೆ.