ನಾಪೋಕ್ಲು, ಸೆ. 16: ಇಲ್ಲಿನ ಮೇರಿ ಮಾತೆ ದೇವಾಲಯದಲ್ಲಿ ವಾರ್ಷಿಕ ಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಧರ್ಮಗುರುಗಳಾದ ಇಗ್ನೇಷಿಯನ್ ಮಸ್ಕರೇನಸ್ ಅವರಿಗೆ ಬೀಳ್ಕೊಡುಗೆ ಹಾಗೂ ಅಭಿನಂದನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು. ದೇವಾಲಯದ ಧರ್ಮಗುರು ಜ್ಞಾನಪ್ರಕಾಶ್ ಶಾಲು ಹೊದಿಸಿ ಸನ್ಮಾನಿಸಿದರು. ಜಾರ್ಜ್ ಮಸ್ಕರೇನಸ್ ಸ್ವಾಗತಿಸಿ ವಂದಿಸಿದರು.ದೇವಾಲಯದ ಸದಸ್ಯರು ಭಕ್ತರು ಪಾಲ್ಗೊಂಡಿದ್ದರು.