ಮಡಿಕೇರಿ, ಸೆ. 16: ಅಖಿಲ ಕೊಡವ ಸಮಾಜದ ವತಿಯಿಂದ ತಲಕಾವೇರಿಯಲ್ಲಿ ತಾ. 21ರಂದು ಶತರುದ್ರಾಭಿಷೇಕ ಪೂಜಾ ಕೈಂಕರ್ಯವನ್ನು ಏರ್ಪಡಿಸಲಾಗಿದೆ.
ಜಿಲ್ಲೆಯ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಿ ಭಕ್ತರ ಸಹಕಾರದೊಂದಿಗೆ ಈ ಸೇವೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅ.ಕೊ.ಸ.ದ ಅಧ್ಯಕ್ಷ ಮಾತಂಡ ಸಿ. ಮೊಣ್ಣಪ್ಪ ಅವರು ತಿಳಿಸಿದ್ದಾರೆ.