ಮಡಿಕೇರಿ ಸೆ. 16 :ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಮಡಿಕೇರಿ ಜಿಲ್ಲಾ ಕೇಂದ್ರ ಗ್ರಂಥಾಲಯವನ್ನು ಕೋಟೆ ಆವರಣದಲ್ಲಿದ್ದ ಕಟ್ಟಡದಿಂದ ಮಡಿಕೇರಿ ಕೈಗಾರಿಕಾ ಬಡಾವಣೆ ಯಲ್ಲಿ ಆಧುನೀಕರಣಗೊಂಡಿರುವ ಕಟ್ಟಡಕ್ಕೆ ಜೂನ್ 5 ರಂದು ಸ್ಥಳಾಂತರಿಸಲಾಗಿದ್ದು, ಕೋವಿಡ್-19 ಪ್ರಯುಕ್ತ ಸರ್ಕಾರದ ಆದೇಶದನುಸಾರ ಮಾರ್ಚ್, 26 ರಿಂದ ನಿರ್ಬಂಧಿಸಲಾಗಿದ್ದ ಸಾರ್ವಜನಿಕರ ಪ್ರವೇಶವನ್ನು ತಾ. 12 ರಿಂದ ಮುಕ್ತಗೊಳಿಸಲಾಗಿದೆ. ಓದುಗರು ಗ್ರಂಥಾಲಯ ಸೌಲಭ್ಯ ಉಪಯೋಗಿಸಿಕೊಳ್ಳುವಂತೆ ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ಅವರು ಕೋರಿದ್ದಾರೆ.