*ಸಿದ್ದಾಪುರ, ಸೆ. 16: ವಾಲ್ನೂರು ಗ್ರಾಮದ ಕಾರ್ಪೋರೇಶನ್ ಬ್ಯಾಂಕ್ ಶಾಖೆಯ ಎಟಿಎಂ ಯಂತ್ರ ಕಳೆದ ಹಲವು ತಿಂಗಳುಗಳಿಂದ ಕಾರ್ಯ ಸ್ಥಗಿತಗೊಳಿಸಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಎಟಿಎಂ ಯಂತ್ರ ಅಳವಡಿಕೆಯ ಸಂದರ್ಭ ದೂರದ ಊರಿಗೆ ಹಣಕ್ಕಾಗಿ ಅಲೆದಾಡುವುದು ತಪ್ಪಿತು ಎಂದು ಬ್ಯಾಂಕ್ ಖಾತೆದಾರರು ಹರ್ಷಗೊಂಡಿದ್ದರು. ಆದರೆ ಕೆಲವೇ ದಿನಗಳಲ್ಲಿ ಎಟಿಎಂ ಕೆಟ್ಟು ಹೋಗಿದ್ದು, ಹಣವೇ ಬರುತ್ತಿಲ್ಲವೆಂದು ಟೀಕಿಸಿದ್ದಾರೆ. ಬ್ಯಾಂಕ್ ವ್ಯವಸ್ಥಾಪಕರು ಹಾಗೂ ಸಿಬ್ಬಂದಿಗಳಿಗೆ ದೂರು ನೀಡಿದರೂ ಯಾವುದೇ ಸ್ಪಂದನೆ ದೊರೆತ್ತಿಲ್ಲವೆಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದೀಗ ಹಣಕ್ಕಾಗಿ ದೂರದ ಊರುಗಳಾದ ಸಿದ್ದಾಪುರ, ನೆಲ್ಲಿಹುದಿಕೇರಿ, ಚೆನ್ನರಾಯಪಟ್ಟಣ ಮತ್ತಿತರ ಕಡೆ ತೆರಳಬೇಕಾಗಿದ್ದು, ತಕ್ಷಣ ದುರಸ್ತಿ ಕಾರ್ಯ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.