ಮಡಿಕೇರಿ, ಸೆ. 16: ನಗರದಲ್ಲಿ ಕಳೆದ ಐದು-ಆರು ತಿಂಗಳುಗಳಿಂದ ಅನಾಥವಾಗಿ ತಿರುಗಾಡುತ್ತಿದ್ದ ವೃದ್ಧ (65)ರನ್ನು ಕಂಡ ಸ್ಥಳೀಯರು ವಿಕಾಸ್ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಅವರ ಗಮನಕ್ಕೆ ತಂದರು.
ವೃದ್ಧ ಮೂಲತಃ ಅಸ್ಸಾಂ ಅವರಾಗಿದ್ದು, ಹಿಂದಿ ಮಾತನಾಡುತ್ತಿದ್ದರು. ಅವರನ್ನು ಸ್ಥಳೀಯ ಸಂಘ ಸಂಸ್ಥೆಗಳ ಮುಖಾಂತರ ಅವರಿಗೆ ಕಟ್ಟಿಂಗ್, ಶೇವಿಂಗ್, ಸ್ವಚ್ಛಗೊಳಿಸಿ ಹೊಸ ಉಡುಪನ್ನು ತೊಡಿಸಿ ಜಿಲ್ಲಾಸ್ಪತ್ರೆಯಲ್ಲಿ ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ನೆಗೆಟಿವ್ ವರದಿ ಬಂದಿದ್ದು, ನಂತರ ಅವರನ್ನು ವಿಕಾಸ್ ಜನ ಸೇವಾ ಟ್ರಸ್ಟ್ ವತಿಯಿಂದ ಸಾನಿಧ್ಯ ಆಶ್ರಮಕ್ಕೆ ಸೇರಿಸಲಾಯಿತು.
ಜೆಸಿಐ ಸುಂಟಿಕೊಪ್ಪ ಅಧ್ಯಕ್ಷರು ಹಾಗೂ ವಿಕಾಸ್ ಜನ ಸೇವಾ ಟ್ರಸ್ಟ್ ಜೀವನದಾರಿ ಆಶ್ರಮದ ಅಧ್ಯಕ್ಷ ರಮೇಶ್ ಹಾಗೂ ಕೊಡಗು ಬ್ಲಡ್ ಡೊನರ್ಸ್ ಅಧ್ಯಕ್ಷ ವೀನು, ಶ್ರೀಶಕ್ತಿ ವೃದ್ಧಾಶ್ರಮದ ಸತೀಶ್ ಹಾಗೂ ಇತರರು ಹಾಜರಿದ್ದರು.